ಸ್ಯಾಂಡಲ್ ವುಡ್ ನಲ್ಲೂ ಇನ್ನೂ ಬೇಡಿಕೆ ಉಳಿಸಿಕೊಂಡಿರುವ ನಟಿ ರಮ್ಯಾ

ಗುರುವಾರ, 1 ಸೆಪ್ಟಂಬರ್ 2022 (08:20 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇಂದಿಗೂ ಕ್ವೀನ್ ಎಂದೇ ಕರೆಯಿಸಿಕೊಳ್ಳುವ ನಟಿ ರಮ್ಯಾ ಕಮ್ ಬ್ಯಾಕ್ ಮಾಡುತ್ತಿದ್ದಾರೆಂದರೆ ಅಭಿಮಾನಿಗಳಿಗೆ ಖುಷಿಯೋ ಖುಷಿ.

ರಮ್ಯಾ ಹೊಸ ಸಿನಿಮಾ ಘೋಷಣೆ ಮಾಡಿದ ಬೆನ್ನಲ್ಲೇ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಸಂತೋಷ ಹೊರಹಾಕುತ್ತಿದ್ದಾರೆ. ಆದರೆ ಅವರು ನಿರ್ಮಾಪಕಿಯಾಗುತ್ತಿದ್ದಾರಷ್ಟೇ. ನಟನೆ ಬಗ್ಗೆ ಇನ್ನೂ ಏನೂ ಹೇಳಿಲ್ಲ.

ಪುನೀತ್ ರಾಜ್ ಕುಮಾರ್ ಅವರಿಂದ ಹಿಡಿದು ಕನ್ನಡದ ಬಹುತೇಕ ಸ್ಟಾರ್ ನಟರಿಗೆ ಜೋಡಿಯಾಗಿ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದ ರಮ್ಯಾ ತಮಿಳಿಗೂ ಹೋಗಿ ಬಂದಿದ್ದರು. ಈ ನಡುವೆ ರಾಜಕೀಯ, ಅನಾರೋಗ್ಯದಿಂದಾಗಿ ಗ್ಯಾಪ್ ಆಗಿದ್ದರೂ ಈಗ ಬಹಳ ವರ್ಷಗಳ ನಂತರ ಮತ್ತೆ ತೆರೆಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಅದು ನಿರ್ಮಾಪಕಿಯಾಗಿಯಾದರೂ ಸೈ, ಅಭಿಮಾನಿಗಳಿಗೆ ಇದು ಖುಷಿ ನೀಡಿದ್ದು, ಸ್ಯಾಂಡಲ್ ವುಡ್ ಕ್ವೀನ್ ನ್ನು ಮತ್ತೆ ಸ್ವಾಗತಿಸಲು ಸಜ್ಜಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ