ಪಣಜಿ: ಗೋವಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡದ ಮೂರು ಚಿತ್ರಗಳು ಪ್ರದರ್ಶನಗೊಳ್ಳಲಿದೆ.
ಅನನ್ಯ ಕಾಸರವಳ್ಳಿ ನಿರ್ದೇಶನದ ಹರಿಕಥಾ ಪ್ರಸಂಗ, ಪವನ್ ಕುಮಾರ್ ಅವರ ಯೂ ಟರ್ನ್ ಮತ್ತು ಟಿ ಎಸ್ ನಾಗಾಭರಣರ ಅಲ್ಲಮ. ನವಂಬರ್ 20 ರಿಂದ 28 ರವರೆಗೆ ಚಿತ್ರೋತ್ಸವ ನಡೆಯಲಿದೆ.
ಇದರಲ್ಲಿ ನಾಗಾಭರಣರ ಅಲ್ಲಮ ಚಿತ್ರ ಪ್ರೀಮಿಯರ್ ಪ್ರದರ್ಶನಗೊಳ್ಳುತ್ತಿರುವುದು ಚಿತ್ರೋತ್ಸವದಲ್ಲಿ ಎನ್ನುವುದು ವಿಶೇಷ. ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನೇತೃತ್ವದ ಸಮಿತಿ ಒಟ್ಟು 22 ಚಿತ್ರಗಳನ್ನು ಆಯ್ಕೆ ಮಾಡಿದ್ದು, ಇದರಲ್ಲಿ ಕನ್ನಡದ ಮೂರು ಚಿತ್ರಗಳು ಸೇರಿವೆ.
ಉಳಿದಂತೆ ತೆಲುಗಿನ ಬಾಹುಬಲಿ, ಹಿಂದಿಯ ಏರ್ ಲಿಫ್ಟ್, ಸುಲ್ತಾನ್, ಮಲಯಾಳಂ ಭಾಷೆಯ ಮೂರು, ಕೊಂಕಣಿ ಭಾಷೆಯ ಮೂರು, ಮರಾಠಿ ಭಾಷೆಯ ನಾಲ್ಕು, ಮಣಿಪುರಿಯ ಎರಡು, ಬೆಂಗಾಲಿ ಭಾಷೆಯ ಮೂರು, ತಮಿಳಿನ ಒಂದು ಚಿತ್ರ, ಅಸ್ಸಾಂ, ಖಾಸಿ ಹಾಗೂ ಸಂಸ್ಕೃತ ಭಾಷೆಯ ತಲಾ ಒಂದೊಂದು ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ