ನಿರ್ದೇಶಕ ಶ್ರೀನಿವಾಸ ರಾಜು ಭಾರಿ ಪ್ರಚಾರದ ಮೂಲಕ ಶುರು ಮಾಡಿದ ಸಿನಿಮಾ ದಂಡುಪಾಳ್ಯ 2. ಇದಕ್ಕೂ ಮುಂಚಿನ ಭಾಗ ಯಶಸ್ವಿಯಾದ ಮೇಲೆ ಅವರಿಗೆ ಭಾಗ 2 ಮಾಡಲು ಹೊಸ ಉತ್ಸಾಹ ಬಂತು. ಅದಕ್ಕೂ ಮುನ್ನ ಉಪೇಂದ್ರ ಜೊತೆಗಿನ ’ಶಿವಂ’ ಓಂ ನಮಃ ಶಿವಾಯ ಆದ ಮೇಲೆ, ರಾಗಿಣಿ ಜೊತೆಗೆ ’ನಾಟಿಕೋಳಿ’ ಮಾಡಿದರು. ಆ ಸಿನಿಮಾಗೆ ಮಸಾಲೆ ಅರೆಯೋದ್ರಲ್ಲೇ ಆಗೋಯ್ತು.
ಎಲ್ಲವೂ ಅಂದುಕೊಂಡ ಪ್ರಕಾರ ಆಗಿದ್ದರೆ ಅಕ್ಟೋಬರ್ ನಲ್ಲಿ ಸಿನಿಮಾ ಬಿಡುಗಡೆ ಮಾಡಬೇಕಿತ್ತು. ಈಗ ಡಿಸೆಂಬರ್ ಅರ್ಧ ಮುಗಿದಿದೆ. ಸಿನಿಮಾ ಮುಗಿಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಿದೆ. ಕೊನೆಯ ಹಂತದ ಚಿತ್ರೀಕರಣ ನಡೆದಿದ್ದು ಮೇನಲ್ಲಿ. ನಂತರ ನಿರ್ಮಾಣ ತಂಡದಿಂದ ಯಾವುದೇ ಸಂಪರ್ಕ ಇಲ್ಲ ಎನ್ನುತ್ತವೆ ಮೂಲಗಳು. ಪೂಜಾಗಾಂಧಿಯ ಒಂದೆರಡು ಪೋಸ್ಟರ್ಗಳು ಬಿಟ್ಟರೆ ಇನ್ನೇನು ಸುದ್ದಿಯಿಲ್ಲ ಈ ಚಿತ್ರದ್ದು.