ನಟಿ ಆಮಿ ಜಾಕ್ಸನ್ ಟ್ವೀಟ್ ನೋಡಿ ಕನ್ನಡಿಗರು ಆಕ್ರೋಶಗೊಂಡಿದ್ಯಾಕೆ?
ಶನಿವಾರ, 20 ಅಕ್ಟೋಬರ್ 2018 (07:11 IST)
ಬೆಂಗಳೂರು : ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ‘ದಿ ವಿಲನ್’ ಚಿತ್ರದ ನಟಿ ಆಮಿ ಜಾಕ್ಸನ್ ವಿರುದ್ಧ ಇದೀಗ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು. ನಟಿ ಆಮಿ ಜಾಕ್ಸನ್ ‘ದಿ ವಿಲನ್’ ಚಿತ್ರದ ಮೂಲಕ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ. ಗುರುವಾರ ಈ ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ದೊರೆತ ಹಿನ್ನಲೆಯಲ್ಲಿ ನಟಿ ಟ್ವೀಟರ್ ನಲ್ಲಿ ‘’ಇಂದು ವಿಶೇಷ ದಿನ. ಇವತ್ತು 'ದಿ ವಿಲನ್' ಚಿತ್ರತಂಡ ಬಿಡುಗಡೆಯ ಸಂಭ್ರಮದಲ್ಲಿ ಇದೆ. 'ಕಾಲಿವುಡ್' ನಲ್ಲಿ ನಟಿಸುವುದಕ್ಕೆ ಅವಕಾಶ ನೀಡಿದ ನಿರ್ದೇಶಕ ಪ್ರೇಮ್ ಅವರಿಗೆ ಧನ್ಯವಾದ ಹೇಳುತ್ತಿದ್ದೇನೆ.'' ಎಂದು ಬರೆದುಕೊಂಡಿದ್ದಾರೆ. ನಟಿ 'ಸ್ಯಾಂಡಲ್ ವುಡ್' ಎಂದು ಬರೆಯುವ ಬದಲು 'ಕಾಲಿವುಡ್' ಎಂದು ಬರೆದಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಕನ್ನಡಿಗರು ನಟಿಯನ್ನು ಸರಿಯಾಗಿ ತರಾಟೆ ತೆಗೆದುಕೊಂಡಿದ್ದಾರೆ. ‘ಯಾವ ಚಿತ್ರರಂಗದಲ್ಲಿ ಅಭಿನಯಿಸುತ್ತೇನೆ ಎಂದು ತಿಳಿಯದೆ ಅಭಿನಯಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ನಿರ್ದೇಶಕ ಪ್ರೇಮ್. ಇಂತಹವರಿಗೆ ಅವಕಾಶ ನೀಡಬಾರದು, ಮೊದಲ ನಿಮ್ಮ ತಪ್ಪನ್ನು ಸರಿ ಮಾಡಿಕೊಳ್ಳಿ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.