ಕಾಂತಾರ ಚಾಪ್ಟರ್ 1 ಶೂಟಿಂಗ್ ಪುನರಾರಂಭ

Krishnaveni K

ಸೋಮವಾರ, 29 ಜುಲೈ 2024 (15:17 IST)
ಕುಂದಾಪುರ: ಮಳೆಯ ಅಬ್ಬರದಿಂದಾಗಿ ಕೆಲವು ದಿನ ಸ್ಥಗಿತಗೊಂಡಿದ್ದ ಕಾಂತಾರ ಚಾಪ್ಟರ್ 1 ಶೂಟಿಂಗ್ ಮತ್ತೆ ಆರಂಭವಾಗಿದೆ. ಕುಂದಾಪುರದಲ್ಲಿ ವಿಶೇಷ ಸೆಟ್ ನಲ್ಲಿ ಚಿತ್ರೀಕರಣ ನಡೆಯುತ್ತಿದೆ.

ಕೆಲವು ದಿನಗಳ ಹಿಂದೆ ಭಾರೀ ಮಳೆಯ ಕಾರಣದಿಂದ ಕಾಂತಾರ ಚಾಪ್ಟರ್ 1 ಸಿನಿಮಾದ ಶೂಟಿಂಗ್ ನ್ನು ರಿಷಬ್ ಆಂಡ್ ಟೀಂ ಅನಿವಾರ್ಯವಾಗಿ ಸ್ಥಗಿತಗೊಳಿಸಿತ್ತು. ಮಳೆಯಿಂದಾಗಿ ಸೆಟ್ ಗೂ ಕೊಂಚ ತೊಂದರೆಯಾಗಿತ್ತು ಎನ್ನಲಾಗಿತ್ತು. ಈ ಎಲ್ಲದರ ನಡುವೆ ರಿಷಬ್ ಕೆಲವು ದಿನ ಬ್ರೇಕ್ ಕೊಟ್ಟಿದ್ದರು.

ಇದೀಗ ಮಳೆಯ ಅಬ್ಬರ ಕೊಂಚ ತಣ್ಣಗಾದ ಮೇಲೆ ಕಾಂತಾರ ಸಿನಿಮಾ ಶೂಟಿಂಗ್ ಪುನರಾರಂಭಗೊಂಡಿದೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಕಾಂತಾರ ಚಾಪ್ಟರ್ 1 ಸಿನಿಮಾದ ಶೂಟಿಂಗ್ ಏಪ್ರಿಲ್ ನಲ್ಲಿಯೇ ಆರಂಭಗೊಂಡಿತ್ತು. ಈ ವರ್ಷದ ಅಂತ್ಯಕ್ಕೆ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ.

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ ಕಾಂತಾರ ಸಿನಿಮಾ ಭಾರೀ ಯಶಸ್ಸು ಕಂಡಿತ್ತು. ರಿಷಬ್ ಗೆ ಡಿವೈನ್ ಸ್ಟಾರ್ ಎಂಬ ಪಟ್ಟವನ್ನೂ ನೀಡಿತ್ತು. ಇದೀಗ ಇದೇ ಯಶಸ್ಸಿನಿಂದಾಗಿ ರಿಷಬ್ ಮತ್ತು ಹೊಂಬಾಳೆ ಫಿಲಂಸ್ ದೊಡ್ಡ ಮಟ್ಟದಲ್ಲೇ ಕಾಂತಾರ ಚಾಪ್ಟರ್ 1 ನಿರ್ಮಾಣಕ್ಕೆ ಕೈ ಹಾಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ