ಕಾಂತಾರ ಚಾಪ್ಟರ್ 1 ಟೀಸರ್ ವೀಕ್ಷಣೆಯಲ್ಲಿ ಹೊಸ ದಾಖಲೆ

ಬುಧವಾರ, 29 ನವೆಂಬರ್ 2023 (11:20 IST)
ಬೆಂಗಳೂರು: ಸೋಮವಾರ ಲಾಂಚ್ ಆಗಿದ್ದ ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಸಿನಿಮಾದ ಫಸ್ಟ್ ಲುಕ್ ಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹೊಂಬಾಳೆ ಫಿಲಂಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಸೋಮವಾರ ಮಧ್ಯಾಹ್ನ 12.25 ಕ್ಕೆ ಟೀಸರ್ ಲಾಂಚ್ ಮಾಡಲಾಗಿತ್ತು. ಇದೀಗ ಟೀಸರ್ ಲಾಂಚ್ ಆದ 24 ಗಂಟೆಯಲ್ಲಿ 1.2 ಕೋಟಿ ವೀಕ್ಷಣೆ ಕಂಡು ಹೊಸ ದಾಖಲೆ ಮಾಡಿದೆ.

ರಿಷಬ್ ಶೆಟ್ಟಿ ಒಂದು ಕೈಯಲ್ಲಿ ಖಡ್ಗ ಇನ್ನೊಂದು ಕೈಯಲ್ಲಿ ತ್ರಿಶೂಲ ಹಿಡಿದು ರೌದ್ರಾವತಾರದಲ್ಲಿರುವ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿತ್ತು. ಈ ಟೀಸರ್ ಏಳು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು.

ಇದೀಗ ಟೀಸರ್ ಕನ್ನಡ ಮಾತ್ರವಲ್ಲದೇ ಪರ ಭಾಷೆಗಳಲ್ಲೂ ಭಾರೀ ಹಿಟ್ ಆಗಿದೆ. ಸೋಮವಾರ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಡಿಸೆಂಬರ್ ನಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಪಾತ್ರವರ್ಗದ ಆಯ್ಕೆ ಕೆಲಸ ನಡೆಯುತ್ತಿದೆ ಎಂದು ರಿಷಬ್ ಮಾಹಿತಿ ನೀಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ