ಕಥಾ ಸಂಗಮದ ಏಳು ಅದ್ಭುತಗಳು ಇಂದು ಬಹಿರಂಗ

ಸೋಮವಾರ, 4 ನವೆಂಬರ್ 2019 (08:56 IST)
ಬೆಂಗಳೂರು: ರಿಷಬ್ ಶೆಟ್ಟಿ ಕನಸಿನ ಕೂಸಾದ ಕಥಾ ಸಂಗಮ ಸಿನಿಮಾದ ಟ್ರೈಲರ್ ಇಂದು ಲಾಂಚ್ ಆಗುತ್ತಿದೆ. ಈ ಸಿನಿಮಾದಲ್ಲಿ ಏಳು ಎಂಬ ಸಂಖ್ಯೆ ವಿಶೇಷವಾಗಿದೆ.


ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಸೇರಿದಂತೆ ಏಳು ನಿರ್ದೇಶಕರು ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಏಳು ಕತೆಗಳು, ಏಳು ಸಂಗೀತ ನಿರ್ದೇಶಕರು ಈ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಈ ಸಿನಿಮಾ ಒಂದು ರೀತಿಯಲ್ಲಿ ಕುತೂಹಲ ಮೂಡಿಸಿದೆ.

ಏಳು ನಿರ್ದೇಶಕರು, ಏಳು ಕತೆಗಳನ್ನು ಒಂದೇ ಸಿನಿಮಾದಲ್ಲಿ ಹೇಗೆ ಹೇಳಿರಬಹುದು ಎಂಬ ಕುತೂಹಲವಿದ್ದರೆ ಸಿನಿಮಾ ಬಿಡುಗಡೆವರೆಗೆ ಕಾಯಬೇಕು. ಆದರೆ ಅದಕ್ಕಿಂತ ಮೊದಲು ಇಂದು ಟ್ರೈಲರ್ ನೋಡಿ ಇದರ ತುಣುಕು ವೀಕ್ಷಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ