ಕಾಂತಾರ 2 ಸಿನಿಮಾ ಮುಂಗಡ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ

Sampriya

ಮಂಗಳವಾರ, 30 ಸೆಪ್ಟಂಬರ್ 2025 (19:34 IST)
Photo Credit X
ಬೆಂಗಳೂರು: ಬಹುನಿರೀಕ್ಷಿತ ಕಾಂತಾರ ಸಿನಿಮಾ ಅಧ್ಯಾಯ 2 ಬಿಡುಗಡೆಗೆ ದಿನಗಣನೆಗೆ ಶುರುವಾಗಿದೆ. ಇದೀಗ ಸಿನಿಮಾದ ಮುಂಗ ಮುಂಗಡ ಬುಕ್ಕಿಂಗ್ ಕರ್ನಾಟಕದಲ್ಲಿ ಅದ್ಭುತ ಪ್ರತಿಕ್ರಿಯೆ ಕಂಡಿದೆ. 

ಈ ಮೂಲಕ ದಾಖಲೆಯ ಆರಂಭ ಶುರು ಮಾಡಿದೆ.  ಆರಂಭಿಕ ಅಂಕಿಅಂಶಗಳ ಪ್ರಕಾರ ಚಿತ್ರವು ಈಗಾಗಲೇ ರಾಜ್ಯಾದ್ಯಂತ ಮುಂಗಡ ಟಿಕೆಟ್ ಮಾರಾಟದಿಂದ ₹ 6.63 ಕೋಟಿ ಸಂಗ್ರಹಿಸಿದೆ, 1215 ಪ್ರದರ್ಶನಗಳನ್ನು ನಿಗದಿಪಡಿಸಲಾಗಿದೆ. ಗಮನಾರ್ಹವಾಗಿ, 520 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಪೂರ್ಣ ಎಂದು ಘೋಷಿಸಲಾಗಿದೆ, ಇದು ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಯನ್ನು ಮೂಡಿಸಿದೆ.

ಈ ಮೂಲಕ ಎಲ್ಲ ಭಾಷೆಗಳಲ್ಲಿ ಚಿತ್ರವು ಸುಮಾರು 9 ಕೋಟಿ ರೂಪಾಯಿಗಳನ್ನು ಪೂರ್ವ ಮಾರಾಟದಿಂದ ಗಳಿಸಿದೆ ಎಂದು ಅಂದಾಜಿಸಲಾಗಿದೆ. ಇದುವರೆಗೆ ದೇಶಾದ್ಯಂತ 1.54 ಲಕ್ಷ ಟಿಕೆಟ್‌ಗಳು ಮಾರಾಟವಾಗಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ