ಯಶ್, ಪುನೀತ್ ಜತೆಗೆ ಅಭಿನಯಿಸಲು ರೆಡಿ ಎಂದ ಕೀರ್ತಿ ಸುರೇಶ್
ಗುರುವಾರ, 5 ನವೆಂಬರ್ 2020 (10:34 IST)
ಬೆಂಗಳೂರು: ಬಹುಭಾಷಾ ನಟಿ ಕೀರ್ತಿ ಸುರೇಶ್ ಅಭಿಮಾನಿಗಳೊಂದಿಗಿನ ಪ್ರಶ್ನೋತ್ತರದ ವೇಳೆ ಸ್ಯಾಂಡಲ್ ವುಡ್ ನಲ್ಲಿ ತಾವು ನಟಿಸಲು ಬಯಸುವ ಇಬ್ಬರು ನಾಯಕ ನಟರ ಹೆಸರು ಬಹಿರಂಗಪಡಿಸಿದ್ದಾರೆ.
ಟ್ವಿಟರ್ ನಲ್ಲಿ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರ ಸಂವಾದ ನಡೆಸಿದ ವೇಳೆ ಕೀರ್ತಿ ಸುರೇಶ್ ಗೆ ಅಭಿಮಾನಿಯೊಬ್ಬರು ಕನ್ನಡದಲ್ಲಿ ನೀವು ಯಾವ ನಟರೊಂದಿಗೆ ನಟಿಸಲು ಇಷ್ಟಪಡುತ್ತೀರಿ ಎಂದು ಕೇಳಿದ್ದಾರೆ. ಇದಕ್ಕೆ ಕೀರ್ತಿ ರಾಕಿಂಗ್ ಸ್ಟಾರ್ ಯಶ್ ಮತ್ತು ಪುನೀತ್ ರಾಜಕುಮಾರ್ ಹೆಸರು ಹೇಳಿದ್ದಾರೆ. ಇನ್ನು ತಮ್ಮ ನೆಚ್ಚಿನ ಕ್ರಿಕೆಟಿಗ ಧೋನಿ ಎಂದು ಇನ್ನೊಬ್ಬ ಅಭಿಮಾನಿಗೆ ಕೀರ್ತಿ ಹೇಳಿಕೊಂಡಿದ್ದಾರೆ.