ಸಿಎಂ ಪಿಣರಾಯಿ ಭೇಟಿ ವೇಳೆ ವಿಶೇಷ ಬೇಡಿಕೆ ಮುಂದಿಟ್ಟ ಕೇರಳ ಮಹಿಳಾ ವೇದಿಕೆ

Sampriya

ಬುಧವಾರ, 11 ಸೆಪ್ಟಂಬರ್ 2024 (20:31 IST)
Photo Courtesy X
ತಿರುವನಂತಪುರ:  ಮಲಯಾಳ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ಹೇಮಾ ಸಮಿತಿ ವರದಿ ಬೆನ್ನಲ್ಲೇ ಸಿಎಂ ಪಿಣರಾಯಿ ವಿಜಯನ್ ಅವರನ್ನು ವುಮೆನ್ ಇನ್ ಸಿನಿಮಾ ಕಲೆಕ್ಟಿವ್ ಪ್ರತಿನಿಧಿಗಳು ಭೇಟಿಯಾದರು.

ಈ ವೇಳೆ ಲೈಂಗಿಕ ಕಿರುಕುಳ ಸಂಬಂಧ ನ್ಯಾಯಮೂರ್ತಿ ಹೇಮಾ ಸಮಿತಿ ಮುಂದೆ ಹೇಳಿಕೆ ನೀಡಿದವರ ಗೋಪ್ಯತೆ ಖಾತ್ರಿಪಡಿಸಬೇಕು ಎಂದು ಮಲಯಾಳ ಚಿತ್ರರಂಗದ ಮಹಿಳಾ ವೇದಿಕೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ನ್ಯಾ.ಹೇಮಾ ಸಮಿತಿಯ ಸಂಪೂರ್ಣ ವರದಿಯನ್ನು ಪೊಲೀಸ್ ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸುವಂತೆ ಕೇರಳ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದ ಮರು ದಿನವೇ ಈ ಬೆಳವಣಿಗೆ ನಡೆದಿದೆ.

ಭೇಟಿ ವೇಳೆ ಕೇರಳ ಸರ್ಕಾರವು ರೂಪಿಸುತ್ತಿರುವ ಉದ್ದೇಶಿತ ಸಿನಿಮಾ ನೀತಿ ಮತ್ತು ಮಲಯಾಳ ಚಿತ್ರೋದ್ಯಮದಲ್ಲಿ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಳ್ಳಬೇಕಿರುವ ಕ್ರಮಗಳ ಕುರಿತು ಸಲಹೆ ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ