ಸ್ಯಾಂಡಲ್ ವುಡ್ ನಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಒಬ್ಬೊಬ್ಬರೇ ನಟಿಯರಿಂದ ಹೇಳಿಕೆ ಶುರು

Krishnaveni K

ಗುರುವಾರ, 5 ಸೆಪ್ಟಂಬರ್ 2024 (10:43 IST)
Photo Credit: Facebook
ಬೆಂಗಳೂರು: ಮಲಯಾಳಂ ಸಿನಿಮಾ ರಂಗದಲ್ಲಿ ಹೇಮಾ ಸಮಿತಿ ವರದಿಯಂತೆ ಕನ್ನಡ ಚಿತ್ರರಂಗದಲ್ಲೂ ಲೈಂಗಿಕ ಕಿರುಕುಳದ ಬಗ್ಗೆ ತನಿಖೆ ನಡೆಸಲು ಪ್ರತ್ಯೇಕ ಸಮಿತಿ ರಚಿಸುವಂತೆ ಫೈರ್ ಸಂಸ್ಥೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಾಡಿದ ಮನವಿ ಬಗ್ಗೆ ಈಗ ಒಬ್ಬೊಬ್ಬರೇ ನಟಿಮಣಿಯರು ಪ್ರತಿಕ್ರಿಯಿಸಲು ಶುರು ಮಾಡಿದ್ದಾರೆ.

ಚೇತನ್ ಅಹಿಂಸಾ ನೇತೃತ್ವದಲ್ಲಿ ಕಿಚ್ಚ ಸುದೀಪ್, ಶ್ರುತಿ ಹರಿಹರನ್, ರಮ್ಯಾ ಸೇರಿದಂತೆ ಹಲವು ತಾರೆಯರು ಸಹಿ ಹಾಕಿದ ಮನವಿ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೀಡಲಾಗಿದೆ. ಸ್ಯಾಂಡಲ್ ವುಡ್ ನಲ್ಲೂ ಕಾಸ್ಟಿಂಗ್ ಕೌಚ್ ನಡೆಯುತ್ತಿರುವ ಬಗ್ಗೆ ಸಮಿತಿ ರಚಿಸಿ ತನಿಖೆ ನಡೆಸಿ ಎಂದು ಮನವಿ ಮಾಡಲಾಗಿದೆ.

ಇದರ ಬೆನ್ನಲ್ಲೇ ಈಗ ಕೆಲವು ನಟಿಯರು ಬಹಿರಂಗವಾಗಿ ಇದಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ನಟಿ ನೀತೂ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಕಮಿಟಿ ವರದಿ ಕ್ರಾಂತಿ ಎಬ್ಬಿಸಿದೆ. ಕನ್ನಡದಲ್ಲೂ ಇಂತಹದ್ದೊಂದು ತನಿಖೆ ನಡೆಯಬೇಕು ಎಂದಿದ್ದಾರೆ.

ಇನ್ನು, ನಟಿ ಹಿತಾ ಚಂದ್ರಶೇಖರ್ ನಾವು ಕೆಲಸ ಮಾಡುವ ಸ್ಥಳ ಆತಂಕ ಮುಕ್ತವಾಗಬೇಕು ಎಂದಿದ್ದಾರೆ. ಇನ್ನೊಬ್ಬ ಸ್ಯಾಂಡಲ್ ವುಡ್ ನಟಿ ಮಾನ್ವಿತಾ ಕಾಮತ್ ಕೂಡಾ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದು ಚಿತ್ರರಂಗದಲ್ಲಿ ಮಹಿಳೆಯರೂ ಗೌರವದಿಂದ ಬದುಕುವಂತಾಗಬೇಕು ಎಂದಿದ್ದಾರೆ. ಅಲ್ಲದೆ, ನಟಿ ಸಂಗೀತಾ ಭಟ್, ಸಂಜನಾ ಗಲ್ರಾನಿ ಸೇರಿದಂತೆ ಅನೇಕರು ಈಗ ಈ ವಿಚಾರವಾಗಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ