ಡಿ.21 ಕ್ಕೆ ಕೆಜಿಎಫ್ 2 ಕಡೆಯಿಂದ ಭರ್ಜರಿ ಸುದ್ದಿ!

ಭಾನುವಾರ, 20 ಡಿಸೆಂಬರ್ 2020 (08:58 IST)
ಬೆಂಗಳೂರು: ಡಿಸೆಂಬರ್ 21 ರಂದು ಕೆಜಿಎಫ್ 2 ಸಿನಿಮಾ ತಂಡದಿಂದ ಅಭಿಮಾನಿಗಳಿಗೆ ಭರ್ಜರಿ ಸುದ್ದಿಯೊಂದು ಕಾದಿದೆಯಂತೆ. ಹೀಗಂತ ಕೆಜಿಎಫ್ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಪ್ರಕಟಣೆ ನೀಡಿದೆ.


ಡಿಸೆಂಬರ್ 21 ಕ್ಕೆ ನಮ್ಮ ಕಡೆಯಿಂದ ಪ್ರತಿ ವರ್ಷದಂತೆ  ಈ ವರ್ಷವೂ ಒಂದು ಭರ್ಜರಿ ಸುದ್ದಿ ನೀಡಲಿದ್ದೇವೆ. ಅದು ಏನೆಂದು ಅದೇ ದಿನ ಬೆಳಿಗ್ಗೆ 10.08 ಕ್ಕೆ ಕೆಜಿಎಫ್ ಅಧಿಕೃತ ಸೋಷಿಯಲ್ ಮೀಡಿಯಾ ಪುಟಗಳಲ್ಲಿ ಪ್ರಕಟವಾಗಲಿದೆ. ಕೆಜಿಎಫ್ 2 ಗಾಗಿ ಕಾಯುತ್ತಿರುವ ಅಭಿಮಾನಿಗಳು ಭರ್ಜರಿ ಸುದ್ದಿಯೊಂದಿಗೆ ಹೊಸ ವರ್ಷ ಸ್ವಾಗತಿಸುವ ಖುಷಿಯಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ