ಜ್ಯೂ. ಚಿರು ಆರೋಗ್ಯದ ಬಗ್ಗೆ ವದಂತಿಗಳನ್ನು ತಳ್ಳಿ ಹಾಕಿದ ಮೇಘನಾ ರಾಜ್

ಶನಿವಾರ, 19 ಡಿಸೆಂಬರ್ 2020 (09:54 IST)
ಬೆಂಗಳೂರು: ಕೊರೋನಾ ಸೋಂಕಿಗೊಳಗಾಗಿದ್ದ ಪುತ್ರನ ಆರೋಗ್ಯದ ಬಗ್ಗೆ ನಟಿ ಮೇಘನಾ ರಾಜ್ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ನೀಡಿದ್ದಾರೆ.


ಜ್ಯೂ. ಚಿರು ಆರೋಗ್ಯದಲ್ಲಿ ತೀವ್ರ ಏರುಪೇರಾಗಿದೆ. ಹೀಗಾಗಿ ಮೇಘನಾ ಮತ್ತು ಕುಟುಂಬಸ್ಥರು ಆಸ್ಪತ್ರೆಗೆ ದೌಡಾಯಿಸಿದ್ದಾರೆ ಎಂದು ಕೆಲವು ಯೂ ಟ್ಯೂಬ್ ವಾಹಿನಿಗಳು ವದಂತಿ ಹಬ್ಬಿಸಿದ್ದವು. ಇದರ ಬಗ್ಗೆ ಸ್ಪಷ್ಟನೆ ನೀಡಿರುವ ಮೇಘನಾ ಇಂತಹ ಸುದ್ದಿಗಳನ್ನೆಲ್ಲಾ ನಂಬಬೇಡಿ. ಜ್ಯೂ. ಚಿರು ಆರೋಗ್ಯವಾಗಿದ್ದಾನೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ