ಬಿಗ್ ನ್ಯೂಸ್ ಬ್ರೇಕ್ ಮಾಡಿದ ಕೆಜಿಎಫ್ ಚಿತ್ರತಂಡ

ಶುಕ್ರವಾರ, 26 ಜುಲೈ 2019 (11:49 IST)
ಬೆಂಗಳೂರು: ಬಿಗ್ ನ್ಯೂಸ್ ಬ್ರೇಕ್ ಮಾಡುತ್ತೇವೆ ಎಂದಿದ್ದ ಕೆಜಿಎಫ್ ಚಾಪ್ಟರ್ 2 ಚಿತ್ರತಂಡ ಕೊನೆಗೂ ಆ ಬಿಗ್ ನ್ಯೂಸ್ ಏನೆಂದು ಬ್ರೇಕ್ ಮಾಡಿದೆ.


ಕೆಜಿಎಫ್ 2 ನಲ್ಲಿ ಯಾರಾದರೂ ಸ್ಟಾರ್ ನಟರ ಎಂಟ್ರಿಯಾಗಬಹುದು ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಕೆಜಿಎಫ್ 2 ತಂಡ ನೇರವಾಗಿ ಅದನ್ನು ಹೇಳದೇ ಇದ್ದರೂ ಸುಳಿವು ನೀಡಿದೆ.

ಇದೇ ಜುಲೈ 29 ಕ್ಕೆ ‘ಅಧೀರ’ ಕ್ಯಾರೆಕ್ಟರ್ ಅನಾವರಣಗೊಳಿಸಲಿರುವುದಾಗಿ ಕೆಜಿಎಫ್ ತಂಡ ಘೋಷಿಸಿದೆ. ಈ ಸುದ್ದಿ ಓದಿದ ಅಭಿಮಾನಿಗಳು ಪಕ್ಕಾ ಈ ಕ್ಯಾರೆಕ್ಟರ್ ಸಂಜಯ್ ದತ್ ಮಾಡುತ್ತಿದ್ದಾರೆ ಎಂದು ಊಹೆ ಮಾಡುತ್ತಿದ್ದಾರೆ.

ಅಭಿಮಾನಿಗಳು ಸುಮ್ಮನೇ ಇದನ್ನು ಊಹೆ ಮಾಡುತ್ತಿಲ್ಲ. ಜುಲೈ 29 ಕ್ಕೆ ಸಂಜಯ್ ದತ್ ಹುಟ್ಟುಹಬ್ಬ. ಹಾಗಾಗಿ ಅದೇ ದಿನವೇ ಕೆಜಿಎಫ್ 2 ಈ ಸ್ಪೆಷಲ್ ಸುದ್ದಿಯನ್ನು ರಿವೀಲ್ ಮಾಡಬಹುದು ಎಂಬುದು ಅಭಿಮಾನಿಗಳ ಲೆಕ್ಕಾಚಾರ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ