ಇಂದು ಕೆಜಿಎಫ್ 2 ಚಿತ್ರ ತಂಡದಿಂದ ಬಿಗ್ ಬ್ರೇಕಿಂಗ್ ನ್ಯೂಸ್ ಔಟ್

ಶುಕ್ರವಾರ, 26 ಜುಲೈ 2019 (09:42 IST)
ಬೆಂಗಳೂರು: ಕೆಜಿಎಫ್ ಚಾಪ್ಟರ್ 1 ಯಶಸ್ಸಿನ ಬಳಿಕ ಕೆಜಿಎಫ್ 2 ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇಂದು ಚಿತ್ರತಂಡ ತಮ್ಮ ಸಿನಿಮಾ ಬಗ್ಗೆ ಬಿಗ್ ಬ್ರೇಕಿಂಗ್ ನ್ಯೂಸ್ ಒಂದನ್ನು ಹೊರಹಾಕಲಿದೆಯಂತೆ.


ಹಾಗಂತ ಚಿತ್ರತಂಡ ಘೋಷಿಸಿದೆ. ಇಂದು ಬೆಳಿಗ್ಗೆ 11 ಗಂಟೆಗೆ ಕೆಜಿಎಫ್ 2 ಸಿನಿಮಾ ಬಗ್ಗೆ ಬಿಗ್ ನ್ಯೂಸ್ ಒಂದನ್ನು ಹೊರಹಾಕಲಿರುವುದಾಗಿ ಹೇಳಿದ್ದಾರೆ.

ಅದು ಯಾವುದು ಎಂಬ ಕುತೂಹಲ ಈಗ ಅಭಿಮಾನಿಗಳಲ್ಲಿದೆ. ಬಹುಶಃ ಕೆಜಿಎಫ್ 2 ಗೆ ದೊಡ್ಡ ಸ್ಟಾರ್ ಎಂಟ್ರಿಯಾಗಬಹುದು, ಇಲ್ಲವೇ ದೊಡ್ಡ ಮಟ್ಟದಲ್ಲಿ ಚಿತ್ರೀಕರಣವಾಗುತ್ತಿರುವುದರ ಬಗ್ಗೆ ಏನಾದರೂ ಮಾಹಿತಿ ನೀಡಬಹುದು. ಆದರೆ ಅದೇನು ಎಂದು ನಿಜವಾಗಿ ತಿಳಿಯಬೇಕಾದರೆ ಇಂದು 11 ಗಂಟೆ ತನಕ ಕಾಯಲೇಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ