ಅಮೆರಿಕಾದಲ್ಲೂ ಟಾಪ್ ಲಿಸ್ಟ್ ನಲ್ಲಿ ಕೆಜಿಎಫ್: ಈ ಮೊದಲು ಹೆಚ್ಚು ಗಳಿಕೆ ಮಾಡಿದ ಟಾಪ್ ಕನ್ನಡ ಸಿನಿಮಾಗಳು ಯಾವುವು ಗೊತ್ತಾ?
ಗುರುವಾರ, 27 ಡಿಸೆಂಬರ್ 2018 (09:43 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಅಮೆರಿಕಾದ ಅಭಿಮಾನಿಗಳಿಗೂ ಇಷ್ಟವಾಗಿದೆ. ಈ ದೇಶದಲ್ಲಿ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಕೆಜಿಎಫ್ ಪಾತ್ರವಾಗಿದೆ.
ಈ ಮೊದಲು ಈ ದಾಖಲೆ ರಂಗಿ ತರಂಗ ಸಿನಿಮಾದ್ದಾಗಿತ್ತು. ಇದೀಗ ಕೆಜಿಎಫ್ ಅದನ್ನು ಮೀರಿಸಿದೆ. ಅಷ್ಟಕ್ಕೂ ಅಮೆರಿಕಾದಲ್ಲಿ ಕೆಜಿಎಫ್ ಗೆ ಸಿಕ್ಕಿರುವ ಅಭೂತಪೂರ್ವ ಪ್ರತಿಕ್ರಿಯೆಯಿಂದಾಗಿ ಅಲ್ಲಿಯೂ ಥಿಯೇಟರ್ ಹೆಚ್ಚಿಸಲು ಚಿಂತನೆ ನಡೆದಿದೆಯಂತೆ.
ಅಮೆರಿಕಾದಲ್ಲಿ ಹೆಚ್ಚು ಗಳಿಕೆ ಮಾಡಿದ ಟಾಪ್ ಐದು ಕನ್ನಡ ಸಿನಿಮಾಗಳು ಯಾವುವು ಗೊತ್ತಾ? ಕೆಜಿಎಫ್ ನಂ.1 ಸ್ಥಾನದಲ್ಲಿದ್ದರೆ, ನಂತರ ರಂಗಿತರಂಗ, ಕಿರಿಕ್ ಪಾರ್ಟಿ, ಗೋದಿ ಬಣ್ಣ ಸಾಧಾರಣ ಮೈ ಕಟ್ಟು ಮತ್ತು ಕೊನೆಯದಾಗಿ ಐದನೇ ಸ್ಥಾನದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾಗಳಿವೆ. ಇದರಲ್ಲಿ ಮೂರು ಸಿನಿಮಾಗಳು ರಿಷಬ್ ಶೆಟ್ಟಿಯವರದ್ದು ಎನ್ನುವುದು ವಿಶೇಷ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ