ಮತ್ತೆ ಶೃತಿ ಹರಿಹರನ್ ಸುದ್ದಿಯಾದ್ರು!, ಮೀ ಟೂ ಬಗ್ಗೆ ಏನಂದ್ರು?

ಬುಧವಾರ, 26 ಡಿಸೆಂಬರ್ 2018 (09:47 IST)
ಬೆಂಗಳೂರು: ಅರ್ಜುನ್ ಸರ್ಜಾ ವಿರುದ್ಧ ಮೀ ಟೂ ಆರೋಪ ಮಾಡಿ ಇದೀಗ ಆ ಸುದ್ದಿಗಳು ತಣ್ಣಗಾಗಿವೆ ಎನ್ನುವಾಗಲೇ ನಟಿ ಶೃತಿ ಹರಿಹರನ್ ಮತ್ತೆ ಇದರ ಬಗ್ಗೆ ಮಾತನಾಡಿದ್ದಾರೆ.


ನಾ ತಿ ಚರಾಮಿ ಎಂಬ ಸಿನಿಮಾವೊಂದನ್ನು ಶೃತಿ ಮಾಡುತ್ತಿದ್ದಾರೆ. ಆ ಸಿನಿಮಾಕ್ಕೆ ಸಂಬಂಧಿಸಿದ ಪ್ರೆಸ್ ಮೀಟ್ ನಲ್ಲಿ ಶೃತಿ ಹರಿಹರನ್ ಬಗ್ಗೆ ಮೀ ಟೂ ಬಗ್ಗೆ ಮಾತನಾಡಿದ್ದಾರೆ. ಈ ಆರೋಪದ ನಂತರ ನಿಮಗೆ ಅವಕಾಶಗಳು ಕಡಿಮೆಯಾಯಿತಾ ಎಂದು ಪತ್ರಕರ್ತರು ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿರುವ ಶೃತಿ ‘ಸದ್ಯಕ್ಕೆ ನನಗೆ ಅವಕಾಶಗಳು ಕಡಿಮೆಯಾಗಿರಬಹುದು. ಆದರೆ ಮೀ ಟೂ ಆರೋಪ ಮಾಡಿದ್ದಕ್ಕೇ ನನಗೆ ಅವಕಾಶಗಳು ಕಡಿಮೆಯಾಗಿದೆ ಎಂದರೆ ಅದರ ಬಗ್ಗೆ ಪಶ್ಚಾತ್ತಾಪವಿಲ್ಲ. ಆದರೆ ಕಾಲ ಹೀಗೇ ಇರೋದಿಲ್ಲ. ಆದರೆ ಮೀ ಟೂ ಆರೋಪ ಮಾಡಿದ್ದಕ್ಕೆ ನನಗೆ ಬೇಸರವಿಲ್ಲ. ಅದರ ಬಗ್ಗೆ ನಾನು ಈಗ ಹೆಚ್ಚು ಹೇಳುವ ಹಾಗಿಲ್ಲ. ಯಾಕೆಂದರೆ ಪ್ರಕರಣ ಕೋರ್ಟ್ ನಲ್ಲಿದೆ. ಒಂದು ವೇಳೆ ಸಂದರ್ಭ ಬಂದರೆ ಮತ್ತೆ ಸುದ್ದಿಗೋಷ್ಠಿ ಕರೆಯುತ್ತೇನೆ’ ಎಂದು ಶೃತಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ