ಕೆಜಿಎಫ್ ಚಾಪ್ಟರ್ 2 – ಬಿಡುಗಡೆ ಬಗ್ಗೆ ನಟ ಯಶ್ ಹೇಳಿದ್ದೇನು?

ಶುಕ್ರವಾರ, 21 ಫೆಬ್ರವರಿ 2020 (20:22 IST)
ನಟ ಯಶ್ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಬಿಡುಗಡೆಗೂ ಮುನ್ನವೇ ದೇಶದಲ್ಲಿ ಕುತೂಹಲ ಹುಟ್ಟಿಸುತ್ತಿದೆ.

ಬಾಲಿವುಡ್ ನಟ ಫರ್ಹಾನ್ ಅಖ್ತರ್ ಟ್ವೀಟ್ ಮಾಡೋ ಮೂಲಕ ಬಹುನಿರೀಕ್ಷಿತ ಐದು ಚಿತ್ರಗಳ ಹೆಸರನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಕೆಜಿಎಫ್ ಚಾಪ್ಟರ್ 2 ಮೊದಲನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಗೋಲಮಾಲ್ 5, ಬ್ರಹ್ಮಾಸ್ತ್ರ, ಸೂರ್ಯವಂಶಿ ಹಾಗೂ 83 ಚಿತ್ರಗಳಿವೆ.

ಇದಕ್ಕೆ ಟ್ವಿಟ್ ನಲ್ಲಿ ಪ್ರತಿಕ್ರಿಯೆ ನೀಡಿರೋ ನಟ ಯಶ್, ಕೆಜಿಎಫ್ ಚಾಪ್ಟರ್ 2 – ರಾಕಿಯ ಬಿರುಗಾಳಿ ಶೀಘ್ರದಲ್ಲಿ ಬರುತ್ತಿದೆ ಅಂತ ಹೇಳೋ ಮೂಲಕ ಸಿನಿಮಾ ರಿಲೀಸ್ ಆದಷ್ಟು ಬೇಗ ಆಗಲಿದೆ ಅನ್ನೋ ಸುಳಿವು ಬಿಟ್ಟುಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ