ನಾಳೆಯಿಂದ ಕೆಜಿಎಫ್ ಹವಾ: ಅಪ್ಪಿ ತಪ್ಪಿ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದಿರೋ.. ಹುಷಾರ್!!

ಗುರುವಾರ, 20 ಡಿಸೆಂಬರ್ 2018 (09:56 IST)
ಬೆಂಗಳೂರು: ನಾಳೆಯಿಂದ ಬಹು ನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಕೆಜಿಎಫ್ ಚಿತ್ರ ದೇಶದಾದ್ಯಂತ ತೆರೆಗೆ ಬರಲಿದ್ದು, ಸುಮಾರು 2000 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಪ್ರದರ್ಶನವಾಗಿ ಕನ್ನಡ ಚಿತ್ರವೊಂದು ಹೊಸ ದಾಖಲೆ ಬರೆಯಲಿದೆ.


ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರ ಬಿಡುಗಡೆಯಾಗುತ್ತಿರುವುದು ಕನ್ನಡ ಚಿತ್ರರಂಗದ ಪಾಲಿಗೆ ಹೆಗ್ಗಳಿಕೆಯೇ ಸರಿ. ಬೇಡಿಕೆಗೆ ಅನುಸಾರವಾಗಿ ಚಿತ್ರ ಬಿಡುಗಡೆ ಮಾಡಲಾಗುತ್ತಿದೆ ಎಂದು ನಿರ್ಮಾಪಕ ವಿಜಯ್ ಕಿರಗಂದೂರ್ ಹೇಳಿದ್ದಾರೆ.

ಇನ್ನು, ಚಿತ್ರಮಂದಿರಗಳಲ್ಲಿ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿರುವುದು ಇತ್ತೀಚೆಗಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಇದು ನಿರ್ಮಾಪಕರಿಗೆ ದೊಡ್ಡ ತಲೆನೋವಾಗುತ್ತಿದೆ.

ಆದರೆ ಕೆಜಿಎಫ್ ನ ದೃಶ್ಯಗಳನ್ನು ಈ ರೀತಿ ಮಾಡಿದರೆ ತಕ್ಷಣವೇ ಅಂತಹವರನ್ನು ಗುರುತಿಸಿ ಸೈಬರ್ ಕ್ರೈಮ್ ಗೆ ದೂರು ನೀಡಲಾಗುವುದು. ಹಾಗೆಯೇ ಇದನ್ನು ನೋಡಿಕೊಳ್ಳಲಿಕ್ಕೆಂದೇ ಪ್ರತ್ಯೇಕ ತಂಡ ರಚಿಸಿದ್ದೇವೆ ಎಂದು ನಿರ್ಮಾಪಕರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಕದ್ದು ಚಿತ್ರೀಕರಿಸುವ ಮೊದಲು ಈ ವಿಚಾರ ನೆನಪಿರಲಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ