ಮೂರನೇ ಬಾರಿಗೆ ರಿರಿಲೀಸ್ ಆಗುತ್ತಿದೆ ಕೆಜಿಎಫ್

ಮಂಗಳವಾರ, 4 ಫೆಬ್ರವರಿ 2020 (09:26 IST)
ಬೆಂಗಳೂರು: ಕನ್ನಡ ಸಿನಿಮಾ ರಂಗಕ್ಕೇ ಹೊಸ ರೂಪು ಕೊಟ್ಟ ಕೆಜಿಎಫ್. ಈ ಸಿನಿಮಾವನ್ನು ಈಗಲೂ ಕನ್ನಡ ಚಿತ್ರ ರಸಿಕರು ಹೆಮ್ಮೆಯಿಂದಲೇ ನೆನೆಸಿಕೊಳ್ಳುತ್ತಾರೆ.


ರಾಕಿಂಗ್ ಸ್ಟಾರ್ ಯಶ್ ರನ್ನು ನ್ಯಾಷನಲ್ ಸ್ಟಾರ್ ಮಾಡಿದ ಕೆಜಿಎಫ್ ಸಿನಿಮಾವನ್ನು ಅಭಿಮಾನಿಗಳ ಒತ್ತಾಯದ ಮೇರೆಗೆ ಮತ್ತೆ ರಿಲೀಸ್ ಮಾಡಲಾಗುತ್ತಿದೆ. ಅದೂ ಮೂರನೇ ಬಾರಿ ಎನ್ನುವುದು ವಿಶೇಷ.

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಂದಲೇ ಈ ಸಿನಿಮಾ ವಿನಾಯಕ ಥಿಯೇಟರ್ ನಲ್ಲಿ ಇಂದಿನಿಂದ ಮತ್ತೆ ರಿಲೀಸ್ ಆಗುತ್ತಿದೆ. ಕೆಲವು ತಿಂಗಳುಗಳ ಹಿಂದಷ್ಟೇ ಈ ಸಿನಿಮಾ ಎರಡನೇ ಬಾರಿ ರಿರಿಲೀಸ್ ಆಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ