ಬೆಂಗಳೂರು: ಕನ್ನಡಿಗರ ಆಶೀರ್ವಾದ ಇರೋತನಕ ಬಿಗ್ ಬಾಸ್ ಸುಲಭವಾಗಿ ನಿಲ್ಲಲ್ಲ ಎಂದು ಜಾಲಿವುಡ್ ಸ್ಟುಡಿಯೋದಲ್ಲಿ ಈಚೆಗೆ ನಡೆದ ಹೈಡ್ರಾಮಾದ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದಾರೆ.
ಅಲ್ಲಿ ನಡೆದ ಘಟನೆಗೂ ಬಿಗ್ ಬಾಸ್‌ಶೋಗೂ ಯಾವುದೇ ಸಂಬಂಧ ಇಲ್ಲ. ಬಿಗ್ ಬಾಸ್ ಎಷ್ಟೋ ಜನಕ್ಕೆ ಅನ್ನಹಾಕಿದೆ, ದಾರಿದೀಪ ಆಗಿದೆ. ಅತಿದೊಡ್ಡ ಶೋ ಕೆಲವರ ಕಣ್ಣು ಕುಕ್ಕುತ್ತಾ ಇರುತ್ತೆ. ಖಾಲಿ ಜಾಗಕ್ಕೆ ಬಿಗ್ ಬಾಸ್ ಅನ್ನೋ ಹೆಸರಿಟ್ಟರೂ ಅದಕ್ಕೊಂದು ತೂಕ ಇದೆ ಎಂದು ತಿರುಗೇಟು ನೀಡಿದರು.
ಹೈಡ್ರಾಮಾದ ಬಳಿಕ ಜಾಲಿವುಡ್ ಸ್ಟುಡಿಯೋ ಮತ್ತೆ ತೆರೆಯಲು ಅನುಮತಿ ನೀಡಿದ ಬಳಿಕ ಬಿಗ್ ಬಾಸ್ ಶೂಟಿಂಗ್ ಮತ್ತೆ ಶುರುವಾಗಿದೆ. ಬಿಗ್ಬಾಸ್ ಕನ್ನಡ ಸೀಸನ್ 12ರ ಎರಡನೇ ವಾರದ ಪಂಚಾಯಿತಿ ಶನಿವಾರ ನಡೆಯಿತು.
ಇದೇ ವೇಳೆ ವಿವಾದದ ಬಗ್ಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದರು. ಕನ್ನಡಿಗರ ಆಶೀರ್ವಾದ ಇರೋತನಕ ಬಿಗ್ ಬಾಸ್ ಸುಲಭವಾಗಿ ನಿಲ್ಲಲ್ಲ. ಇಲ್ಲಿ ಆಗಿದ್ದೇ ಬೇರೆ.. ಹೊರಗಡೆ ನಡಿತಾ ಇದ್ದಿದ್ದೆ ಬೇರೆ. ಇಲ್ಲಿ ನಡೆದಿರುವ ವಿಚಾರಕ್ಕೂ ಬಿಗ್ ಬಾಸ್‌ಗೂ, ಕಲರ್ಸ್ ಕನ್ನಡಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದರು.
ವಿವಾದ ಬಂದಿದ್ದು ನಾವು ಶೋ ನಡೆಸುತ್ತಿದ್ದ ಜಾಗದ್ದು. ಕೆಲವೊಮ್ಮೆ ಖಾಲಿ ಜಾಗಕ್ಕೆ ಒಂದು ಅಡ್ರೆಸ್ ಬೇಕಾಗುತ್ತೆ. ಆ ಅಡ್ರೆಸ್ಸೆ ಬಿಸ್ ಬಾಸ್ ಆಗಿ ಹೋಯ್ತು ಅಂತ ಸ್ಪಷ್ಟನೆ ನೀಡಿದರು.
ಇಂತಹ ಸಂದರ್ಭದಲ್ಲಿ ಶೋ ಮತ್ತೆ ಶುರುವಾಗಲು ಕಾರಣರಾದ ಡಿಕೆ ಸಾಹೇಬ್ರಿಗೆ ಹಾಗೂ ನನ್ನ ಸ್ನೇಹಿತ ನಲಪಾಡ್ ಅವರಿಗೆ ಧನ್ಯವಾದ ಹೇಳಲೇಬೇಕು. ಹಾಗೆಯೇ ಸಪೋರ್ಟ್ ಮಾಡಿದ ಆಡಳಿತ ಮಂಡಳಿಯ ಎಲ್ಲರಿಗೂ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.