ಬೆಂಗಳೂರು: ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್ ಜಿಮ್ಮಿ ಟೀಸರ್ ಲಾಂಚ್ ವೇಳೆ ಹಾಡಿದ ಹಾಡಿನ ಬಗ್ಗೆ ಮತ್ತು ಅವರು ಮಾತನಾಡಿದ್ದರ ಬಗ್ಗೆ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಸಾನ್ವಿ ಜಿಮ್ಮಿ ಸಿನಿಮಾದ ಹಾಡು ಹಾಡಿದ್ದರು. ಆದರೆ ಇದು ಇಂಗ್ಲಿಷ್ ಹಾಡಾಗಿತ್ತು. ಇದೇ ಮೊದಲ ಬಾರಿಗೆ ಅವರು ಸಿನಿಮಾಗಾಗಿ ಹಾಡಿದ್ದಾರೆ.
ಜಿಮ್ಮಿ ನಾಯಕ ಸಂಚಿತ್ ಸುದೀಪ್ ಅಕ್ಕನ ಮಗ. ಹೀಗಾಗಿ ಬಾವನಿಗೆ ಸಾನ್ವಿ ವೇದಿಕೆ ಮೇಲೆ ಶುಭ ಕೋರಿದ್ದಾರೆ. ಸಂಚಿತ್ ಬಗ್ಗೆ ಮಾತನಾಡಿದ್ದಾರೆ. ಆದರೆ ಸಂಪೂರ್ಣವಾಗಿ ಅವರು ಇಂಗ್ಲಿಷ್ ನಲ್ಲೇ ಮಾತನಾಡಿದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಸಾನ್ವಿಗೆ ಕನ್ನಡ ಬರಲ್ವಾ? ಯಾಕೆ ಕನ್ನಡ ಹಾಡಿಲ್ಲ? ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ.