ನಾನು ಯಾರ ಜತೆ ಮಲಗಬೇಕೆಂದೂ ನೀವೇ ಡಿಸೈಡ್ ಮಾಡ್ತೀರಾ? ದರ್ಶನ್ ಹೇಳಿಕೆ ಗರಂ ಆದ ಸುದೀಪ್ ಫ್ಯಾನ್ಸ್!

ಸೋಮವಾರ, 5 ಆಗಸ್ಟ್ 2019 (09:34 IST)
ಬೆಂಗಳೂರು: ಕುರುಕ್ಷೇತ್ರ ಸಿನಿಮಾ ರಿಲೀಸ್ ಗೂ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನೀಡಿದ ಹೇಳಿಕೆಯೊಂದು ಸುದೀಪ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.


ಇತ್ತೀಚೆಗೆ ಸುದೀಪ್ ನಿಮ್ಮಿಬ್ಬರ ಸ್ನೇಹದ ಬಗ್ಗೆ ಮಾತನಾಡಿದ್ದರು. ನೀವು ಸುದೀಪ್ ಬಗ್ಗೆ ಏನು ಹೇಳ್ತೀರಿ? ಎಂದು ಪತ್ರಕರ್ತೆರು ಕೇಳಿದಾಗ ದರ್ಶನ ಸಿಟ್ಟಾದರು.

‘ಇನ್ಮೇಲೆ ದರ್ಶನ್ ಏನು ಬೆಳಿಗ್ಗೆ ಎಷ್ಟೊತ್ತಿಗೆ ಏಳಬೇಕು, ಏನು ತಿನ್ನಬೇಕು, ಯಾರ ಫೋನ್ ಅಟೆಂಡ್ ಮಾಡಬೇಕು, ಯಾರ ಜತೆ ಫ್ರೆಂಡ್ ಶಿಪ್ ಮಾಡಬೇಕು, ರಾತ್ರಿ ಅವನ ಹೆಂಡತಿ ಜತೆ ಮಲಗಬೇಕಾ? ಬೇಡವಾ ಎಂದು ಮಾಧ್ಯಮದವರೇ ಡಿಸೈಡ್ ಮಾಡ್ತೀರಾ? ಅದು ನನ್ನ ವೈಯಕ್ತಿ. ಏನು ಮಾಡಬೇಕೆಂದು ನನಗೆ ಗೊತ್ತು’ ಎಂದು ರಾಂಗ್ ಆಗಿ ಪ್ರತಿಕ್ರಿಸಿದರು.

ಆದರೆ ದರ್ಶನ್ ಈ ಹೇಳಿಕೆ ಕಿಚ್ಚ ಸುದೀಪ್ ಅಭಿಮಾನಿಗಳನ್ನು ಕೆರಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸುದೀಪ್ ಅಭಿಮಾನಿಗಳು ನೀವು ಇಷ್ಟು ಒಳ್ಳೆಯವರಾಗಬೇಡಿ. ಇನ್ನು ಮುಂದೆ ದರ್ಶನ್ ಬಗ್ಗೆ ಮಾತನಾಡಬೇಡಿ ಎಂದು ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ