ಮ್ಯಾಕ್ಸ್ ಅಪ್ ಡೇಟ್ ಕೊಡಿ: ಕಿಚ್ಚ ಸುದೀಪ್ ಮತ್ತು ಚಿತ್ರತಂಡಕ್ಕೆ ದಂಬಾಲು ಬಿದ್ದ ಫ್ಯಾನ್ಸ್

Krishnaveni K

ಸೋಮವಾರ, 15 ಜನವರಿ 2024 (14:51 IST)
ಬೆಂಗಳೂರು: ಸಂಕ್ರಾಂತಿ ಹಬ್ಬದಂದು ಹಲವು ಸಿನಿಮಾಗಳ ಪೋಸ್ಟರ್, ಟ್ರೈಲರ್, ರಿಲೀಸ್ ದಿನಾಂಕ ಇತ್ಯಾದಿ ಬಿಡುಗಡೆಯಾಗಿದೆ.

ಹೀಗಾಗಿ ಕಿಚ್ಚ ಸುದೀಪ್ ನಾಯಕರಾಗಿರುವ ಮ್ಯಾಕ್ಸ್ ಸಿನಿಮಾದಿಂದಲೂ ಅಪ್ ಡೇಟ್ ಸಿಗಬಹುದು ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿತ್ತು. ಆದರೆ ಅದು ಸುಳ್ಳಾಗಿದೆ.

ಮ್ಯಾಕ್ಸ್ ಸಿನಿಮಾವನ್ನು ತಮಿಳು ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿದೆ. ತಮಿಳಿನಲ್ಲಿ ಪೊಂಗಲ್ ಹಬ್ಬ ಬಲು ಜೋರು. ಸಾಮಾನ್ಯವಾಗಿ ಈ ವಿಶೇಷ ದಿನಕ್ಕೆ ತಮಿಳು ಸಿನಿಮಾ ಸಂಸ್ಥೆಗಳು ಏನಾದರೂ ಒಂದು ಅಪ್ ಡೇಟ್ ಕೊಟ್ಟೇ ಕೊಡುತ್ತದೆ.

ಹೀಗಾಗಿ ಮ್ಯಾಕ್ಸ್ ಸಿನಿಮಾ ರಿಲೀಸ್ ಡೇಟ್ ಆದರೂ ಘೋಷಣೆ ಮಾಡಿ ಎಂದು ಫ್ಯಾನ್ಸ್ ಸೋಷಿಯಲ್ ಮೀಡಿಯಾ ಮೂಲಕ ಚಿತ್ರತಂಡಕ್ಕೆ ಕೋರಿಕೆಯಿಟ್ಟಿದ್ದಾರೆ. ಇದುವರೆಗೆ ಮ್ಯಾಕ್ಸ್ ಪೋಸ್ಟರ್ ಬಿಟ್ಟರೆ ಬೇರೆ ಯಾವುದೇ ಅಪ್ ಡೇಟ್ ಸಿಕ್ಕಿಲ್ಲ. ಈಗಾಗಲೇ ಚಿತ್ರ ಫೈನಲ್ ಹಂತದ ಶೂಟಿಂಗ್ ನಲ್ಲಿದೆ. ಇದೇ ತಿಂಗಳು ಚಿತ್ರತಂಡದ ಕಡೆಯಿಂದ ಅಪ್ ಡೇಟ್ ಸಿಗುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ