ಫೈಟಿಂಗ್ ಮಾಡಲು ವಿದೇಶಕ್ಕೆ ತೆರಳಿದ ಕಿಚ್ಚ ಸುದೀಪ್

ಮಂಗಳವಾರ, 24 ಸೆಪ್ಟಂಬರ್ 2019 (07:35 IST)
ಬೆಂಗಳೂರು: ಪೈಲ್ವಾನ್ ಯಶಸ್ಸಿನ ಬಳಿಕ ಕಿಚ್ಚ ಸುದೀಪ್ ಈಗ ಸಂಪೂರ್ಣವಾಗಿ ತಮ್ಮ ಮುಂದಿನ ಸಿನಿಮಾ ಕೋಟಿಗೊಬ್ಬ 3 ಕಡೆಗೆ ಗಮನಹರಿಸಿದ್ದಾರೆ.


ಕಿಚ್ಚ ಸುದೀಪ್ ಈಗ ತಮ್ಮ ಕೋಟಿಗೊಬ್ಬ 3 ಸಿನಿಮಾದ ಫೈಟಿಂಗ್ ಸೀಕ್ವೆನ್ಸ್ ನ ಚಿತ್ರೀಕರಣಕ್ಕಾಗಿ ಪೊಲ್ಯಾಂಡ್ ಗೆ ತೆರಳಿದ್ದಾರೆ. ಇಲ್ಲಿ ಚೇಸಿಂಗ್ ದೃಶ್ಯವೊಂದರ ಚಿತ್ರೀಕರಣ ನಡೆಯಲಿದೆಯಂತೆ.

ವಿಶೇಷವೆಂದರೆ ಕಿಚ್ಚ ಸುದೀಪ್ ಪ್ರಯಾಣಿಸುತ್ತಿದ್ದ ವಿಮಾನದಲ್ಲೇ ಬೆಂಗಳೂರಿನಿಂದ ಟಿ20 ಪಂದ್ಯ ಮುಗಿಸಿ ದುಬೈ ಮಾರ್ಗವಾಗಿ ತವರಿಗೆ ಮರಳುತ್ತಿದ್ದ ದ.ಆಫ್ರಿಕಾ ಕ್ರಿಕೆಟಿಗರು ಪ್ರಯಾಣಿಸಿದ್ದು ಇವರ ಜತೆಗೆ ಸೆಲ್ಫೀ ತೆಗೆದುಕೊಂಡ ಕಿಚ್ಚ ಕ್ರಿಕೆಟಿಗರ ಜತೆಗೆ ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ದು ಖುಷಿ ತಂದಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ