ಕೋಟಿಗೊಬ್ಬ 3 ಹಾಡಿಗೆ 5 ಮಿಲಿಯನ್ ವೀಕ್ಷಣೆ: ಕಿಚ್ಚ ಸುದೀಪ್ ಖುಷಿ

ಶುಕ್ರವಾರ, 1 ಮೇ 2020 (10:47 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾದ ಟೈಟಲ್ ಹಾಡು ಮೊನ್ನೆಯಷ್ಟೇ ಬಿಡುಗಡೆಯಾಗಿತ್ತು. ಈ ಹಾಡು ಈಗ ದಾಖಲೆ ವೀಕ್ಷಣೆ ಪಡೆದಿದೆ.


ಮೊನ್ನೆಯಷ್ಟೇ ಕೋಟಿಗೊಬ್ಬ 3 ಸಿನಿಮಾದ ‘ಆಕಾಶವೆ ಅದಿರಿಸುವ’ ಹಾಡು ಬಿಡುಗಡೆಯಾಗಿತ್ತು. ಬಿಡುಗಡೆಯಾದ ಮೂರೇ ಗಂಟೆಗಳಲ್ಲಿ 1 ಮಿಲಿಯನ್ ವೀಕ್ಷಣೆ ಪಡೆದು ದಾಖಲೆ ಮಾಡಿತ್ತು.

ಇದೀಗ ಒಟ್ಟಾರೆ 5 ಮಿಲಿಯನ್ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದ್ದು, ಕಿಚ್ಚ ಸುದೀಪ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಅಭಿಮಾನಿಗಳ ಜತೆ ಖುಷಿ ಹಂಚಿಕೊಂಡಿದ್ದಾರೆ. ಆನಂದ್ ಅಡಿಯೋ ಯೂ ಟ್ಯೂಬ್ ವಾಹಿನಿ ಕೂಡಾ ಅಭಿಮಾನಿಗಳ ಪ್ರತಿಕ್ರಿಯೆಗೆ ಸಂತಸಗೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ