ಕೆಪಿಎಲ್-8 ಟಿ20 ಟ್ರೋಫಿ ಅನಾವರಣಗೊಳಿಸಿದ ಕಿಚ್ಚ ಸುದೀಪ್

ಬುಧವಾರ, 14 ಆಗಸ್ಟ್ 2019 (09:49 IST)
ಬೆಂಗಳೂರು: ಕರ್ನಾಟಕ ಕ್ರಿಕೆಟ್ ಸಂಸ್ಥೆ ಸಹಯೋಗದಿಂದ ನಡೆಯಲಿರುವ ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಟ್ರೋಫಿಯನ್ನು ಕಿಚ್ಚ ಸುದೀಪ್ ಅನಾವರಣಗೊಳಿಸಿದ್ದಾರೆ.


ಟ್ರೋಫಿ ಅನಾವರಣ ಸಮಾರಂಭದಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣ ಮೂರ್ತಿ, ಮಾಜಿ ಕ್ರಿಕೆಟಿಗ ಬಿಎಸ್‍ ಚಂದ್ರಶೇಖರ್ ಉಪಸ್ಥಿತರಿದ್ದರು. ಈ ಬಾರಿ ಮೂರು ಮಹಿಳಾ ತಂಡಗಳೂ ಆಡುತ್ತಿರುವುದು ವಿಶೇಷ.

ಈ ವೇಳೆ ಮಾತನಾಡಿರುವ ಕಿಚ್ಚ ಸುದೀಪ್ ಮುಂದಿನ ವರ್ಷ ಕೆಪಿಎಲ್ ನಲ್ಲಿ ಆಡುವುದಾಗಿ ಹೇಳಿಕೊಂಡಿದ್ದಾರೆ. ಹಿಂದೊಮ್ಮೆ ಕಿಚ್ಚ ನೇತೃತ್ವದ ತಂಡ ಕೆಪಿಎಲ್ ನಲ್ಲಿ ಆಡಿಯೂ ಹೀನಾಯ ಪ್ರದರ್ಶನ ನೀಡಿತ್ತು. ಆಗಸ್ಟ್ 16 ರಿಂದ ರಾಜ್ಯದ ವಿವಿಧೆಡೆ ಟೂರ್ನಮೆಂಟ್ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ