ಕೊನೆಗೂ ತಮ್ಮ ನಿರ್ದೇಶನದ ಸಿನಿಮಾ ಬಗ್ಗೆ ಗುಟ್ಟು ಬಿಟ್ಟುಕೊಟ್ಟ ಕಿಚ್ಚ ಸುದೀಪ್

ಸೋಮವಾರ, 30 ಡಿಸೆಂಬರ್ 2019 (08:58 IST)
ಬೆಂಗಳೂರು: ಕಿಚ್ಚ ಸುದೀಪ್ 2020 ಕ್ಕೆ ಒಂದು ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಿಚ್ಚ ಬಿಟ್ಟುಕೊಟ್ಟಿರಲಿಲ್ಲ.


ಸುದೀಪ್ ರಿಮೇಕ್ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿದಾಗ ಇದು ಪಕ್ಕಾ ಸ್ವಮೇಕ್ ಎಂದು ಒಮ್ಮೆ ಸ್ಪಷ್ಟನೆ ಕೊಟ್ಟಿದ್ದು ಬಿಟ್ಟರೆ ಸಿನಿಮಾ ಬಗ್ಗೆ ಇನ್ಯಾವ ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ.

ಇದೀಗ ಕಿಚ್ಚ ಸುದೀಪ್ ಏಳು ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕಿಳಿಯುತ್ತಿರುವುದರ ಬಗ್ಗೆ ಮಾತನಾಡಿದ್ದಾರೆ. ಈ ಸಿನಿಮಾ  ಮತ್ತು ಇತರ ತಾಂತ್ರಿಕ ತಂಡದ ಬಗ್ಗೆ ಸದ್ಯದಲ್ಲೇ ಮಾಹಿತಿ ನೀಡುತ್ತೇನೆ. ಮತ್ತೆ ನನ್ನ ಪ್ರೀತಿಯ ಕೆಲಸವನ್ನು ಮಾಡಲು ಸಂತೋಷವಾಗುತ್ತಿದೆ. ಅದೂ ಏಳು ವರ್ಷದ ಬಿಡುವಿನ ನಂತರ. ನಿಮಗೆ ನಾನು ನಿರಾಸೆ ಮಾಡಲ್ಲ ಎಂದು ಕಿಚ್ಚ ಪ್ರಾಮಿಸ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ