ಹುಟ್ಟುಹಬ್ಬದ ದಿನ ದರ್ಶನ್ ಜೊತೆಗಿನ ಪೇಚ್ ಅಪ್ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್

ಶನಿವಾರ, 2 ಸೆಪ್ಟಂಬರ್ 2023 (18:26 IST)
ಬೆಂಗಳೂರು: ಇಂದು ಕಿಚ್ಚ ಸುದೀಪ್ ತಮ್ಮ ಹುಟ್ಟುಹಬ್ಬದ ಸಂಭ್ರಮವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಇದೇ ವೇಳೆ ನಟ ದರ್ಶನ್ ಜೊತೆಗಿನ ಪ್ಯಾಚ್ ಅಪ್ ಬಗ್ಗೆಯೂ ಮಾತನಾಡಿದ್ದಾರೆ.

ಸುದೀಪ್ ಮತ್ತು ದರ್ಶನ್ ಇತ್ತೀಚೆಗೆ ಸುಮಲತಾ ಅಂಬರೀಶ್ ಬರ್ತ್ ಡೇ ಪಾರ್ಟಿಯಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಇಬ್ಬರೂ ಪರಸ್ಪರ ಮಾತನಾಡದೇ ಇದ್ದರೂ ಬಹಳ ಸಮಯದ ನಂತರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ಖುಷಿ ನೀಡಿತ್ತು.

ಇಂದು ಸುದೀಪ್ ಈ ಬಗ್ಗೆ ಮಾತನಾಡಿದ್ದು, ‘ದರ್ಶನ್, ನಾನು ಒಂದೇ ಪಾರ್ಟಿಯಲ್ಲಿ ಭೇಟಿಯಾಗಿದ್ದು ಸಂತೋಷ ತಂದಿದೆ. ನಾವು ಕಿತ್ತಾಡಿಕೊಂಡಿಲ್ಲ. ದರ್ಶನ್ ಮೇಲೆ ನನಗೆ ಕೋಪವಿಲ್ಲ. ನನಗೆ ಕೆಲವು ಪ್ರಶ್ನೆಗಳಿವೆ. ಅದೇ ರೀತಿ ದರ್ಶನ್ ಗೂ ಇರಬಹುದು. ಸುಮಲತಾ ಮೇಲೆ ಗೌರವದಿಂದ ಅಲ್ಲಿಗೆ ಹೋಗಿದ್ದೆ. ಇಬ್ಬರೂ ಮುಖಾಮುಖಿಯಾದಾಗಲೇ ಪರಿಹಾರ ಸಿಗುವುದು’ ಎಂದು ಸುದೀಪ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ