ವಿಜಯ್ ರಾಘವೇಂದ್ರ ನಿವಾಸಕ್ಕೆ ತೆರಳಿ ಸಾಂತ್ವನಿಸಿದ ಕಿಚ್ಚ ಸುದೀಪ್ ದಂಪತಿ
ಹುಟ್ಟುಹಬ್ಬದ ಮುನ್ನಾದಿನ ಪತ್ನಿ ಪ್ರಿಯಾ ಜೊತೆಗೆ ವಿಜಯ್ ರಾಘವೇಂದ್ರ ನಿವಾಸಕ್ಕೆ ಕಿಚ್ಚ ಭೇಟಿ ಕೊಟ್ಟಿದ್ದಾರೆ. ಈ ವೇಳೆ ನಟ ಶ್ರೀಮುರಳಿ ಕೂಡಾ ಅಲ್ಲಿದ್ದರು.
ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ನಿಧನರಾದಾಗ ಸುದೀಪ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರಿಂದ ಅಂತಿಮ ದರ್ಶನ ಪಡೆಯಲು ಬಂದಿರಲಿಲ್ಲ. ಇದೀಗ ವಿಜಯ್ ನಿವಾಸಕ್ಕೆ ತೆರಳಿ ಅವರನ್ನು ಅಪ್ಪಿ ಸಾಂತ್ವನ ಹೇಳಿ ಬಂದಿದ್ದಾರೆ.