ಕೋಟಿಗೊಬ್ಬ 3 ಟ್ರೈಲರ್ ಸಕ್ಸಸ್ ನಿಂದ ಖುಷಿಯಾದ ಕಿಚ್ಚ ಸುದೀಪ್

ಶನಿವಾರ, 9 ಅಕ್ಟೋಬರ್ 2021 (11:31 IST)
ಬೆಂಗಳೂರು: ಕೋಟಿಗೊಬ್ಬ 3 ಟ್ರೈಲರ್ ಮೊನ್ನೆಯಷ್ಟೇ ಲಾಂಚ್ ಆಗಿ ಭಾರೀ ಯಶಸ್ಸು ಕಂಡಿದೆ. ಯೂ ಟ್ಯೂಬ್ ನಲ್ಲಿ ಭಾರೀ ವೀಕ್ಷಣೆ ಪಡೆದಿದೆ.


ಅಕ್ಟೋಬರ್ 14 ರಂದ ಚಿತ್ರ ತೆರ ಕಾಣಲಿದ್ದು, ಇದಕ್ಕೂ ಮೊದಲು ಹೆಚ್ಚು ಪ್ರಚಾರದ ಅಬ್ಬರವಿಲ್ಲದಿದ್ದರೂ ಟ್ರೈಲರ್ ಗೇ ಸಿಕ್ಕ ಪ್ರತಿಕ್ರಿಯೆ ನೋಡಿ ಕಿಚ್ಚ ಸುದೀಪ್ ಖುಷಿಯಾಗಿದ್ದಾರೆ. ಇದಕ್ಕೆ ಕಾರಣರಾದವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

ರಾಜ್ಯಾದ್ಯಂತ ಸುಮಾರು 350 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು, ಇದೇ ದಿನ ದುನಿಯಾ ವಿಜಯ್ ಅಭಿನಯದ ಸಲಗ ಸಿನಿಮಾ ಬಿಡುಗಡೆಯಾಗುತ್ತಿದ್ದರೂ ಕೋಟಿಗೊಬ್ಬ 3 ಗಳಿಕೆಗೆ ಹೊಡೆತ ಬೀಳದು ಎಂಬುದು ಗಾಂಧಿನಗರಿಗರ ಲೆಕ್ಕಾಚಾರ. ಟ್ರೈಲರ್ ನಲ್ಲಿ ಕಿಚ್ಚ ಸುದೀಪ್ ರ ಆಕ್ಷನ್, ಅದ್ಧೂರಿ ಮೇಕಿಂಗ್ ನೋಡಿ ಜನ ಚಿತ್ರಮಂದಿರದತ್ತ ಬರಬಹುದು ಎಂಬ ನಿರೀಕ್ಷೆ ಚಿತ್ರತಂಡದ್ದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ