ಕಿಚ್ಚ ಸುದೀಪ್ ಮುಂದಿನ ಸಿನಿಮಾ ಬಗ್ಗೆ ಸಿಕ್ಕಿದೆ ಮಹತ್ವದ ಸುಳಿವು

ಬುಧವಾರ, 25 ಆಗಸ್ಟ್ 2021 (10:25 IST)
ಬೆಂಗಳೂರು: ಕೋಟಿಗೊಬ್ಬ 3, ವಿಕ್ರಾಂತ್ ರೋಣ ಬಳಿಕ ಕಿಚ್ಚ ಸುದೀಪ್ ಅಭಿನಯಿಸಲಿರುವ ಮುಂದಿನ ಸಿನಿಮಾ ಯಾವುದು? ಈ ಪ್ರಶ್ನೆಗೆ ಈಗ ಸುಳಿವೊಂದು ಸಿಕ್ಕಿದೆ.

Photo Courtesy: Twitter

ತಮಿಳಿನ ಖ್ಯಾತ ನಿರ್ದೇಶಕ ವೆಂಕಟ್ ಪ್ರಭು ಸುದೀಪ್ ನಿವಾಸಕ್ಕೆ ಭೇಟಿಯಾಗಿದ್ದು ಹೊಸ ಸಿನಿಮಾ ಬಗ್ಗೆ ಚರ್ಚೆ ನಡೆಸಿದ್ದಾರೆ. ಕಿಚ್ಚನೂ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.

ಹೀಗಾಗಿ ಕಿಚ್ಚನ ಮುಂದಿನ ಸಿನಿಮಾಗೆ ಕಾಲಿವುಡ್ ನಿರ್ದೇಶಕ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗಿದೆ. ತಮ್ಮ ಮನೆಗೆ ಬಂದ ವೆಂಕಟ್ ಪ್ರಭುಗೆ ಕಿಚ್ಚನೇ ಅಡುಗೆ ಮಾಡಿ ಭರ್ಜರಿ ಆತಿಥ್ಯ ಕೊಟ್ಟಿದ್ದಾರಂತೆ. ಸ್ವತಃ ವೆಂಕಟ್ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ