ಪಟಾಕಿ ಪೋರಿಯೋ ಹಾಡಿನ ವಿಡಿಯೋ ಪ್ರಕಟಿಸಿದ ಕಿಚ್ಚ ಸುದೀಪ್ ರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದೇಕೆ?

ಬುಧವಾರ, 25 ನವೆಂಬರ್ 2020 (09:04 IST)
ಬೆಂಗಳೂರು: ಕಿಚ್ಚ ಸುದೀಪ್ ಇತ್ತೀಚೆಗೆ ಲಾಂಚ್ ಆದ ತಮ್ಮ ಕೋಟಿಗೊಬ್ಬ 3 ಸಿನಿಮಾದ ಪಟಾಕಿ ಪೋರಿಯೋ ಹಾಡಿಗೆ ಯುವ ಸಮೂಹವೊಂದು ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದರು.


ಪಾರ್ಟಿಯೊಂದರಲ್ಲಿ ಈ ಹಾಡಿಗೆ ಕುಣಿದು ಕುಪ್ಪಳಿಸುವ ವಿಡಿಯೋ ಪ್ರಕಟಿಸಿದ ಕಿಚ್ಚ ಸುದೀಪ್ ರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಊರಿಡೀ ಕೊರೋನಾ ಇರುವಾಗ ನೀವು ಬೆಚ್ಚಗೆ ಮನೆಯಲ್ಲಿ ಕೂತು ಫ್ಯಾನ್ಸ್ ಗೆ ಸಾಮಾಜಿಕ ಅಂತರವೂ ಇಲ್ಲದೇ, ಸುರಕ್ಷತೆಯ ನಿಯಮಗಳನ್ನೂ ಪಾಲಿಸದೇ ಕುಣಿದು ಕುಪ್ಪಳಿಸಲು ಪ್ರೇರೇಪಣೆ ನೀಡುತ್ತಿದ್ದೀರಿ ಎಂದು ಹಲವರು ಟೀಕೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ