ನನ್ನ ಮಗ ದರ್ಶನ್ ಡಿ ಬಾಸ್ ಅಲ್ಲ ಎಂದ ಸುಮಲತಾ ಅಂಬರೀಶ್!

ಶನಿವಾರ, 10 ಆಗಸ್ಟ್ 2019 (10:45 IST)
ಬೆಂಗಳೂರು: ಕುರುಕ್ಷೇತ್ರ ಸಿನಿಮಾ ನಿನ್ನೆ ಬಿಡುಗಡೆಯಾಗಿದ್ದು, ಸಿನಿಮಾ ನೋಡಿದವರು ದರ್ಶನ್ ಅವರ ದುರ್ಯೋಧನನ ಪಾತ್ರಕ್ಕೆ ಫಿದಾ ಆಗಿದ್ದಾರೆ.


ಸಿನಿಮಾ ವೀಕ್ಷಿಸಿದ ಸುಮಲತಾ ಅಂಬರೀಶ್ ದರ್ಶನ್ ಮತ್ತು ಇತರ ಕಲಾವಿದರ ಅಭಿನಯದ ಬಗ್ಗೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ದರ್ಶನ್ ರನ್ನು ಜನ ಡಿ ಬಾಸ್ ಎಂದು ಪ್ರೀತಿಯಿಂದ ಕರೆಯುತ್ತಾರೆ. ಆದರೆ ಇನ್ಮುಂದೆ ಅವರು ಬರೀ ಡಿ ಬಾಸ್ ಅಲ್ಲ, ದುರ್ಯೋಧನ ಬಾಸ್ ಎಂದು ಸುಮಲತಾ ಹೊಗಳಿದ್ದಾರೆ. ಯಾಕೆಂದರೆ ದರ್ಶನ್ ದುರ್ಯೋಧನನ ಪಾತ್ರದಲ್ಲಿ ಅಷ್ಟು ಪ್ರಭಾವ ಬೀರುತ್ತಾರೆ ಎಂದು ಮನೆ ಮಗನ ಬಗ್ಗೆ ಹೊಗಳಿದ್ದಾರೆ.

ಇನ್ನು, ಇದು ಅಂಬರೀಶ್ ಅವರ ಕೊನೆಯ ಸಿನಿಮಾವೂ ಆಗಿರುವುದರಿಂದ ನನಗೆ ಭಾವನಾತ್ಮಕವಾಗಿ ಮೆಚ್ಚಿನ ಸಿನಿಮಾ ಎಂದಿದ್ದಾರೆ. ಅಷ್ಟೇ ಅಲ್ಲ ಚಿತ್ರದಲ್ಲಿ ಅಭಿನಯಿಸಿರುವ ಪ್ರತಿಯೊಬ್ಬರೂ ಅದ್ಭುತವಾಗಿ ಅಭಿನಯಿಸಿದ್ದಾರೆ. ಇದು ನಿಜವಾಗಿಯೂ ಅದ್ಭುತ ಸಿನಿಮಾ ಎಂದು ಸುಮಲತಾ ಕೊಂಡಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ