ಈಗಾಗಲೇ ವಾಣಿಜ್ಯ ಮಂಡಳಿ ಕೂಡಾ ಈ ನಟನ ವಿರುದ್ಧ ದಕ್ಷಿಣ ಭಾರತ ಸಿನಿಮಾ ತಂಡಕ್ಕೆ ದೂರು ಕೊಡುವ ನಿರ್ಧಾರ ಮಾಡಿದೆ. ವಿಜಯ ರಂಗರಾಜು ಅವರೇ ಒಬ್ಬ ವ್ಯಕ್ತಿ ಬದುಕಿದ್ದಾಗ ಅವರ ಬಗ್ಗೆ ಮಾತನಾಡುವುದರಲ್ಲಿ ಗಂಡಸ್ತನ ಇದೆ ಎಂದು ನಂಬಿದ್ದೇನೆ. ಆಗ ನೀವು ಮಾಡುವ ಆರೋಪಿಗಳಿಗೆ ಅವರು ಉತ್ತರ ಕೊಡುತ್ತಾರೆ. ಕೋಟಿ ಕೋಟಿ ಆರಾಧಕರನ್ನು ಹೊಂದಿರುವ ವಿಷ್ಣು ಸರ್ ಬಗ್ಗೆ ಅವರು ಇಲ್ಲದೇ ಇರುವಾಗ ಮಾತನಾಡುವುದು ಬಹಳ ದೊಡ್ಡ ತಪ್ಪು. ನಿಮ್ಮಂತಹ ಒಬ್ಬ ವ್ಯಕ್ತಿ ಈ ಥರಾ ಮಾತನಾಡುವುದರಿಂದ ಬೇರೆ ಬೇರೆ ಭಾಷೆಯ ಚಿತ್ರರಂಗ ಚೂರು ಚೂರು ಆಗ್ತದೆ. ನನ್ನ ಪ್ರಕಾರ ನಿಮ್ಮ ಇಂಡಸ್ಟ್ರಿಯಲ್ಲೇ ಯಾರೂ ಒಪ್ಪಲ್ಲ. ಅವರ ಬಗ್ಗೆ ಏನೇನೋ ಮಾತಾಡಿದ್ದೀರಲ್ಲಾ? ಅವರಿಲ್ಲದೇ ಇದ್ದರೂ ಅವರು ಕೋಟಿ ಕೋಟಿ ಮಕ್ಕಳನ್ನು ಬಿಟ್ಟೋಗಿದ್ದಾರೆ. ವಾರ್ನಿಂಗ್ ಎಲ್ಲಾ ಬೇಡ. ನಾವೆಲ್ಲಾ ಇದ್ದೀವಿ. ಸುಮ್ನೇ ಕೂತಿಲ್ಲ. ನೀವು ಏನು ಮಾತಾಡಿದ್ದೀರಿ ಅದನ್ನು ವಾಪಸ್ ತಗೊಳ್ಳಿ ಎಂದು ಖಡಕ್ ಆಗಿ ಸುದೀಪ್ ಹೇಳಿದ್ದಾರೆ.