ರಕ್ಷಿತ್ ಶೆಟ್ಟಿ ನಿಯಮ ಪಾಲಿಸಿದ ಕಿಚ್ಚ ಸುದೀಪ್!

ಭಾನುವಾರ, 20 ಆಗಸ್ಟ್ 2023 (17:08 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ನಟ ಕಿಚ್ಚ ಸುದೀಪ್ ಎಂದರೆ ಎಷ್ಟು ಅಚ್ಚು ಮೆಚ್ಚು, ಅಭಿಮಾನ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ.

ರಕ್ಷಿತ್ ಶೆಟ್ಟಿ ತಮ್ಮೆಲ್ಲಾ ಟ್ರೈಲರ್, ಸಿನಿಮಾಗಳನ್ನು ಕಿಚ್ಚ ಸುದೀಪ್ ಗೆ ಮೊದಲು ತೋರಿಸುತ್ತಾರೆ. ಇದೀಗ ಸಪ್ತಸಾಗರದಾಚೆ ಎಲ್ಲೊ ಸಿನಿಮಾದಲ್ಲೂ ಸುದೀಪ್ ರಕ್ಷಿತ್ ರ ಆ ನಿಯಮ ಮುಂದುವರಿದಿದೆ.

ಸಪ್ತಸಾಗರದಾಚೆ ಎಲ್ಲೊ ಸಿನಿಮಾ ಟ್ರೈಲರ್ ಮೊನ್ನೆಯಷ್ಟೇ ಬಿಡುಗಡೆಯಾಗಿತ್ತು. ಇದೀಗ ಸುದೀಪ್ ತಮ್ಮ ಕಿಚ್ಚ46 ಸಿನಿಮಾ ಶೂಟಿಂಗ್ ಬ್ಯುಸಿಯ ನಡುವೆಯೂ ಸಪ್ತಸಾಗರದಾಚೆ ಎಲ್ಲೊ ಸಿನಿಮಾದ ಟ್ರೈಲರ್ ವೀಕ್ಷಿಸಿ ಮೆಚ್ಚುಗೆಯ ಮಾತನಾಡಿದ್ದಾರೆ. ಟ್ವೀಟ್ ಮೂಲಕ ಟ್ರೈಲರ್ ಅದ್ಭುತವಾಗಿದೆ ಎಂದು ಹೊಗಳಿದ್ದಾರೆ. ಅದರಲ್ಲೂ  ಯಾಕ್ ಹೀಗ್ ಮಾಡ್ದೆ ಎಂಬ ವಾಕ್ಯವಂತೂ ತುಂಬಾ ಇಷ್ಟವಾಯಿತು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ