ಸಪ್ತಸಾಗರದಾಚೆ ಎಲ್ಲೊ ಟ್ರೈಲರ್ ರಿಲೀಸ್ ದಿನಾಂಕ ತಿಳಿಸಿದ ರಕ್ಷಿತ್ ಶೆಟ್ಟಿ

ಮಂಗಳವಾರ, 15 ಆಗಸ್ಟ್ 2023 (09:50 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಾಯಕರಾಗಿರುವ ಸಪ್ತಸಾಗರದಾಚೆ ಎಲ್ಲೊ ಸಿನಿಮಾ ಬಗ್ಗೆ ಕನ್ನಡ ಸಿನಿ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಯಿದೆ.

ಈ ಸಿನಿಮಾ ಸೆಪ್ಟೆಂಬರ್ 1 ರಂದು ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ. ರಕ್ಷಿತ್ ಶೆಟ್ಟಿ ಸಿನಿಮಾವೆಂದರೆ ಅದರಲ್ಲಿ ಏನೋ ವಿಶೇಷವಿರುತ್ತದೆ ಎಂಬ ಕಾರಣಕ್ಕೆ ಅಭಿಮಾನಿಗಳು ಥಿಯೇಟರ್ ಗೆ ಬರುತ್ತಾರೆ. ಈ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು ಮೊದಲ ಭಾಗ ಸೆಪ್ಟೆಂಬರ್ 1 ರಂದು ಮತ್ತು ಎರಡನೇ ಭಾಗ ಅಕ್ಟೋಬರ್ ನಲ್ಲಿ ಬಿಡುಗಡೆಯಾಗಲಿದೆ.

ಇದೀಗ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಲು ನಿರ್ದೇಶಕ ಹೇಮಂತ್ ರಾವ್ ತಯಾರಿ ನಡೆಸಿದ್ದಾರೆ. ಆಗಸ್ಟ್ 17 ರಂದು ಸಪ್ತಸಾಗರಚಾದೆ ಎಲ್ಲೊ ಟ್ರೈಲರ್ ಲಾಂಚ್ ಆಗಲಿದೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ