ನಗು ನಗುತ್ತಲೇ ಗೋಲ್ಡ್‌ ಸುರೇಶ್‌ಗೆ ಕ್ಲಾಸ್‌ ತೆಗೆದುಕೊಂಡ ಕಿಚ್ಚ ಸುದೀಪ

Sampriya

ಶನಿವಾರ, 12 ಅಕ್ಟೋಬರ್ 2024 (16:58 IST)
Photo Courtesy X
ಒಳ್ಳೆಯ ಟಿಆರ್‌ಪಿಯೊಂದಿಗೆ  ಬಿಗ್‌ಬಾಸ್ ಸೀಸನ್ 11 ಶೋ ಉತ್ತಮ ಆರಂಭವನ್ನು ಪಡೆದು, ಎರಡು ವಾರಗಳನ್ನು ಪೂರೈಸುತ್ತಿದೆ.

ಈಗಾಗಲೇ ಟಾಸ್ಕ್ ವಿಚಾರವಾಗಿ ಸ್ಪರ್ಧಿಗಳ ಮಧ್ಯೆ ಮನಸ್ತಾಪ ಶುರುವಾಗಿದೆ. ಅದಲ್ಲದೆ ರೂಲ್ಸ್‌ ಬ್ರೇಕ್ ವಿಚಾರವಾಗಿ ಮನೆಯವರೆಲ್ಲ ನೇರ ನಾಮಿನೇಟ್ ಆಗಿದ್ದಾರೆ. ಈ ವಾರದ ಕಿಚ್ಚನ ಪಂಚಾಯಿತಿಯಲ್ಲಿ ಯಾರಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆಂಬ ಕುತೂಹಲ ಬಿಗ್‌ಬಾಸ್ ಪ್ರಿಯರಿಗೆ ಕುತೂಹಲ ಮೂಡಿಸಿದೆ.

ಇದೀಗ ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಮನೆಯ ಮೂಲ ನಿಯಮ ರೂಲ್ಸ್ ಬ್ರೇಕ್ ಮಾಡಲು ಮೊದಲು ಪ್ರೇರಣೆ ಕೊಟ್ಟ ಗೋಲ್ಡ್‌ ಸುರೇಶ್‌ಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಅದಲ್ಲದೆ ಇದನ್ನು ಅನುಷಾ ರೈ ಅವರೇ ಮೊದಲು ಮಾಡಿದ್ದು ಎಂದು ಗೌತಮಿ ಅವರಿಗೆ ತಿಳಿಸಿದ್ದರಿಂದ ಅವರು ನೇರವಾಗಿ ಮನೆಯಿಂದ ಹೋಗಲು ನಾಮಿನೇಟ್ ಆಗಿದ್ದಾರೆ. ಇದರಿಂದ ಅನುಷಾ ಹಾಗೂ ಗೋಲ್ಡ್ ಸುರೇಶ್ ಮಧ್ಯೆ ಮಾತಿನ ಚಕಮಕಿಯು ನಡೆದಿತ್ತು. ಇದೀಗ ಇಂದು ನಗು ನಗುತ್ತಲೇ ಕಿಚ್ಚ ಸುದೀಪ ಈ ವಿಚಾರವಾಗಿ ಗೋಲ್ಡ್ ಸುರೇಶ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ