ಕೋಟಿಗೊಬ್ಬ 3 ರಿಲೀಸ್ ಗೆ ಇನ್ನಷ್ಟು ದಿನ ಕಾಯಲೇ ಬೇಕು

ಸೋಮವಾರ, 19 ಏಪ್ರಿಲ್ 2021 (09:20 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ಸದ್ಯಕ್ಕೆ ರಿಲೀಸ್ ಆಗಲ್ಲ. ಕಾರಣ ಎಲ್ಲರಿಗೂ ಗೊತ್ತಿರುವ ಹಾಗೆ, ಥಿಯೇಟರ್ ಸಮಸ್ಯೆ.


ಕೊರೋನಾ ಕಾರಣದಿಂದಾಗಿ ರಾಜ್ಯ ಸರ್ಕಾರ ಶೇ.50 ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿದೆ. ಹೀಗಾಗಿ ಸ್ಟಾರ್ ಸಿನಿಮಾಗಳು ಈಗ ಬಿಡುಗಡೆ ಮಾಡಲು ಹಿಂದೇಟು ಹಾಕಲಾಗುತ್ತಿದೆ.

ಅದೇ ಸಾಲಿಗೆ ಕೋಟಿಗೊಬ್ಬ 3 ಕೂಡಾ ಸೇರುತ್ತಿದೆ. ಶೇ.100 ಥಿಯೇಟರ್ ಪ್ರವೇಶಕ್ಕೆ ಅನುಮತಿ ಸಿಗುವವರೆಗೂ ಕೋಟಿಗೊಬ್ಬ 3 ಸಿನಿಮಾ ಬಿಡುಗಡೆ ಮಾಡದೇ ಇರಲು ಚಿತ್ರತಂಡ ನಿರ್ಧರಿಸಿದೆ. ಹೀಗಾಗಿ ಸದ್ಯಕ್ಕೆ ಈ ಸಿನಿಮಾ ಬಿಡುಗಡೆಯಾಗದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ