ಅನಾರೋಗ್ಯಕ್ಕೀಡಾಗಿರುವ ಕಿಚ್ಚನಿಗೆ ಕೈತುತ್ತು ಕೊಟ್ಟ ಬಿಗ್ ಬಾಸ್ ಸದಸ್ಯರು

ಭಾನುವಾರ, 18 ಏಪ್ರಿಲ್ 2021 (10:39 IST)
ಬೆಂಗಳೂರು: ಅನಾರೋಗ್ಯಕ್ಕೀಡಾಗಿರುವ ಕಾರಣ ಈ ವಾರದ ಬಿಗ್ ಬಾಸ್ ರಿಯಾಲಿಟಿ ಶೋ ನಿರೂಪಣೆಯಿಂದ ಹಿಂದೆ ಸರಿದಿರುವ ಕಿಚ್ಚ ಸುದೀಪ್ ಗೆ ಮನೆಯ ಸದಸ್ಯರು ಸರ್ಪೈಸ್ ಕೊಟ್ಟಿದ್ದಾರೆ.


ಈ ವಾರ ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆ ಮಾಡುತ್ತಿಲ್ಲ ಎಂಬ ಸುದ್ದಿ ಕೇಳಿ ಮನೆಯ ಸದಸ್ಯರು ಬೇಸರಗೊಂಡರು. ಹೀಗಾಗಿ ಕಿಚ್ಚನಿಗೆ ತಾವೇ ಕೈಯಾರೆ ಅಡುಗೆ ಮಾಡಿ ಪ್ರೀತಿಯಿಂದ ಪತ್ರ ಬರೆದು ಕೈ ತುತ್ತು ಕೊಟ್ಟಿದ್ದಾರೆ.

ತಾನು ಅನಾರೋಗ್ಯಕ್ಕೀಡಾಗಿದ್ದು, ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಹೀಗಾಗಿ ಈ ವಾರ ಬಿಗ್ ಬಾಸ್ ನಿರೂಪಣೆ ಮಾಡಲ್ಲ ಎಂದು ಸುದೀಪ್ ಟ್ವೀಟ್ ಮಾಡಿದ್ದರು. ಹೀಗಾಗಿ ಕಿಚ್ಚನ ಬದಲು ಯಾರು ಬಿಗ್ ಬಾಸ್ ಶೋ ನಿರೂಪಣೆ ಮಾಡಬಹುದು ಎಂದು ಪ್ರೇಕ್ಷಕರಲ್ಲಿ ಕುತೂಹಲವಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ