ಮಹಾಶಿವರಾತ್ರಿಗೆ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡಲಿದ್ದಾರೆ ಕಿಚ್ಚ ಸುದೀಪ್

ಸೋಮವಾರ, 17 ಫೆಬ್ರವರಿ 2020 (11:01 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಸಿನಿಮಾ ಚಿತ್ರೀಕರಣ ಮುಗಿದು ದಿನಗಳೇ ಮುಗಿದಿದೆ. ಆದರೆ ಚಿತ್ರತಂಡದಿಂದ ಇನ್ನೂ ಹೊಸ ಸುದ್ದಿ ಬಂದಿಲ್ಲವಲ್ಲ ಎಂದು ಕಾದಿದ್ದವರಿಗೆ ಹೊಸ ಸುದ್ದಿ ಸಿಕ್ಕಿದೆ.


ಇದೇ ಶುಕ್ರವಾರ ಮಹಾಶಿವರಾತ್ರಿ ದಿನ ಕೋಟಿಗೊಬ್ಬ 3 ಟೀಸರ್ ಬಿಡುಗಡೆಯಾಗಲಿದೆ. ಈಗಾಗಲೇ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದ ಚಿತ್ರತಂಡ ಚಿತ್ರದ ಬಗ್ಗೆ ಕುತೂಹಲ ಹುಟ್ಟುವಂತೆ ಮಾಡಿತ್ತು.

ಇದೀಗ ಕಿಚ್ಚನ ಸಿನಿಮಾಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಶಿವರಾತ್ರಿ ದಿನ ಚಿತ್ರತಂಡ ಸರ್ಪ್ರೈಸ್ ಕೊಡಲಿದೆ. ಮಧ್ಯಾಹ್ನ 12.01 ಕ್ಕೆ ಚಿತ್ರದ ಟೀಸರ್ ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ