ಕಿಚ್ಚ46 ಪ್ರೋಮೋ ಶೂಟ್ ಮುಕ್ತಾಯ: ಜೂನ್ 1 ಕ್ಕೆ ಸಿಗಲಿದೆ ಅಪ್ ಡೇಟ್

ಮಂಗಳವಾರ, 23 ಮೇ 2023 (08:30 IST)
Photo Courtesy: Twitter
ಬೆಂಗಳೂರು: ಕಿಚ್ಚ ಸುದೀಪ್ ಮುಂದಿನ ಸಿನಿಮಾಗೆ ತಯಾರಿ ಆರಂಭಿಸಿದ್ದು, ನಿನ್ನೆ ಪ್ರೋಮೋ ಶೂಟ್ ನಲ್ಲಿ ಭಾಗಿಯಾಗಿದ್ದಾರೆ.

ಕಿಚ್ಚ ಇತ್ತೀಚೆಗೆ ಮೂರು ಸ್ಕ್ರಿಪ್ಟ್ ಗಳನ್ನು ಒಪ್ಪಿಕೊಂಡಿದ್ದು, ಈ ವರ್ಷ ಮೂರು ಸಿನಿಮಾಗೆ ಸಹಿ ಹಾಕಿರುವುದಾಗಿ  ಹೇಳಿಕೊಂಡಿದ್ದರು. ಅದು ಯಾವುದು ಎಂಬ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.

ಇದೀಗ ಆ ಪೈಕಿ ಒಂದು ಸಿನಿಮಾ ತಯಾರಿ ಆರಂಭವಾಗಿದೆ. ಅದರಂತೆ ನಿನ್ನೆ ಪ್ರೋಮೋ ಶೂಟ್ ನಡೆದಿದ್ದು, ಜೂನ್ 1 ಕ್ಕೆ ಸಿನಿಮಾ ಬಗ್ಗೆ ಅಪ್ ಡೇಟ್ ಸಿಗಲಿದೆ. ವಿಕ್ರಾಂತ್ ರೋಣ ಬಳಿಕ ಸುದೀಪ್ ಪೂರ್ಣಪ್ರಮಾಣದಲ್ಲಿ ನಾಯಕರಾಗಿ ಮಾಡುತ್ತಿರುವ ಸಿನಿಮಾ ಇದಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ