ನವರಸನಾಯಕ ಜಗ್ಗೇಶ್ ಗೂ ತಟ್ಟಿದ ಮಳೆಯ ಅವಾಂತರ

ಸೋಮವಾರ, 22 ಮೇ 2023 (09:30 IST)
Photo Courtesy: Twitter
ಬೆಂಗಳೂರು: ನಿನ್ನೆ ಮಧ್ಯಾಹ್ನ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರಿಗರು ಪರಿತಾಪ ಪಡುತ್ತಿದ್ದಾರೆ. ಭಾರೀ ಬಿರುಗಾಳಿ ಮಳೆಯಿಂದ ಹಲವೆಡೆ ಮನೆಗೆ ನೀರು ನುಗ್ಗಿದೆ.

ಮಳೆಯ ಅವಾಂತರ ನವರಸನಾಯಕ ಜಗ್ಗೇಶ್ ಗೂ ತಟ್ಟಿದೆ. ಜಗ್ಗೇಶ್ ಮಳೆಯಿಂದ ತಮಗಾದ ತೊಂದರೆ ಬಗ್ಗೆ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ನಮ್ಮ ಮನೆಯಲ್ಲಿ ರಿಪೇರಿ ಕಾರ್ಯವಿದ್ದರಿಂದ ಐಷಾರಾಮಿ ಬಿಎಂಡಬ್ಲ್ಯು5 ಕಾರನ್ನು ಸ್ನೇಹಿತ ಮುರಳಿ ಮನೆಯಲ್ಲಿ ನಿಲ್ಲಿಸಿದ್ದೆ. ಆದರೆ ನಿನ್ನೆಯ ಮಳೆಯಿಂದ ಕಾರು ಮುಳುಗಡೆಯಾಗಿದೆ. ಇದೀಗ ನೀರು ಹೊರಹಾಕುವ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ