ಕಿಸ್ಸಿಂಗ್ ವಿಡಿಯೋ ವಿವಾದ: ಕೊನೆಗೂ ಮೌನ ಮುರಿದ ಹಿರಿಯ ಗಾಯಕ ಉದಿತ್ ನಾರಾಯಣ್‌

Sampriya

ಶನಿವಾರ, 1 ಫೆಬ್ರವರಿ 2025 (16:38 IST)
Photo Courtesy X
ಬೆಂಗಳೂರು: ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ತನ್ನ ಗಾಯನದ ಮೂಲಕ ಮೋಡಿ ಮಾಡಿದ ಹಿರಿಯ ಗಾಯಕ ಉದಿತ್ ನಾರಾಯಣ್ ಅವರು ಇದೀಗ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ವೇದಿಕೆಯಲ್ಲಿ ಗಾಯನ ನಡೆಯುತ್ತಿರುವಾಗ ಸೆಲ್ಫಿ ತೆಗೆಯಲು ಬಂದ ಮಹಿಳೆಯರಿಗೆ ಲಿಪ್‌ಲಾಕ್ ಆಡುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ.

ಗಾಯಕ ಉದಿತ್ ನಾರಾಯಣ್ ಅವರು ಮಹಿಳಾ ಅಭಿಮಾನಿಯೊಬ್ಬರಿಗೆ ತುಟಿಗಳಿಗೆ ಚುಂಬಿಸುತ್ತಿರುವ ವಿಡಿಯೋ ವೈರಲ್ ಆಗಿರುವ ವಿವಾದಕ್ಕೆ ಕೊನೆಗೂ ಪ್ರತಿಕ್ರಿಯಿಸಿದ್ದಾರೆ.

ಶನಿವಾರ ಮುಂಜಾನೆ ವೈರಲ್ ಆದ ಕ್ಲಿಪ್‌ನ ಬಗ್ಗೆ ಪ್ರತಿಕ್ರಿಯಿಸಿದ ಉದಿತ್ ನಾರಾಯಣ್ ಅವರು,  ಟೀಕೆಗಳನ್ನು ತಳ್ಳಿಹಾಕಿದ ಅವರು, ನನ್ನ ಅಭಿಮಾನಿಗಳು ಮತ್ತು ನನ್ನ ನಡುವಿನ ಪ್ರೀತಿಯ ಅಭಿವ್ಯಕ್ತಿ ಎಂದು ಹೇಳಿದರು.

ಪದ್ಮಶ್ರೀ ಮತ್ತು ಪದ್ಮಭೂಷಣ ಪುರಸ್ಕೃತರಾಗಿರುವ ಉದಿತ್ ನಾರಾಯಣ್ ಅವರು ಈ ರೀತಿಯ  ನಡವಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ.

ನಾನು ಎಲ್ಲವನ್ನೂ ಸಾಧಿಸಿರುವ ನನ್ನ ಜೀವನದ ಈ ಹಂತದಲ್ಲಿ ನಾನು ಈಗ ಏನನ್ನಾದರೂ ಏಕೆ ಮಾಡುತ್ತೇನೆ? ನನ್ನ ಸಂಗೀತ ಕಚೇರಿಗಳಿಗೆ ಪ್ರಪಂಚದಾದ್ಯಂತ ಜನರು ಸೇರುತ್ತಾರೆ. ಟಿಕೆಟ್‌ಗಳನ್ನು ತಿಂಗಳ ಮೊದಲೇ ಮಾರಾಟ ಮಾಡಲಾಗುತ್ತದೆ. ನನ್ನ ಅಭಿಮಾನಿಗಳು ಮತ್ತು ನನ್ನ ನಡುವೆ ಆಳವಾದ ಶುದ್ಧ ಮತ್ತು ಮುರಿಯಲಾಗದ ಬಾಂಧವ್ಯವಿದೆ. ಹಗರಣದ ವೀಡಿಯೊ ಎಂದು ಕರೆಯಲ್ಪಡುವಲ್ಲಿ ನೀವು ನೋಡಿರುವುದು ನನ್ನ ಅಭಿಮಾನಿಗಳು ಮತ್ತು ನನ್ನ ನಡುವಿನ ಪ್ರೀತಿಯ ಅಭಿವ್ಯಕ್ತಿಯಾಗಿದೆ. ಅವರು ನನ್ನನ್ನು ಪ್ರೀತಿಸುತ್ತಾರೆ ಮತ್ತು ನಾನು ಅವರನ್ನು ಇನ್ನಷ್ಟು ಪ್ರೀತಿಸುತ್ತೇನೆ ಎಂದು ರಿಯ್ಯಾಕ್ಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ