ಚಿತ್ರರಂಗಕ್ಕೆ ಬಂದು 29 ವರ್ಷ: ಕಿಚ್ಚ ಸುದೀಪ್ ಸಂದೇಶದಲ್ಲಿ ಏನಿದೆ ನೋಡಿ

Krishnaveni K

ಶುಕ್ರವಾರ, 31 ಜನವರಿ 2025 (13:59 IST)
ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಬಂದು 29 ವರ್ಷವಾದ ಹಿನ್ನಲೆಯಲ್ಲಿ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಸೋಷಿಯಲ್ ಮೀಡಿಯಾ ಮೂಲಕ ವಿಶೇಷ ಸಂದೇಶ ಬರೆದಿದ್ದಾರೆ.

ಕಿಚ್ಚ ಸುದೀಪ್ ಈ ಬಗ್ಗೆ ಟ್ವೀಟ್ ಮಾಡಿದ್ದು ತಮಗೆ ಶುಭಾಶಯ ಹೇಳಿದವರಿಗೆ, ಹಾರೈಸಿದವರಿಗೆ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ. ನನ್ನ ಹೃದಯಾಳದಿಂದ ಧನ್ಯವಾದ ಸಲ್ಲಿಸುವುದಾಗಿ ಹೇಳಿದ್ದಾರೆ.

’29 ವರ್ಷಗಳು.. ನಾನು ನಡೆದ ಹಾದಿ ಬಗ್ಗೆ ನನಗೆ ಕೃತಜ್ಞತೆಯಿದೆ. ಪ್ರೇಕ್ಷಕರನ್ನು ಮನರಂಜಿಸಲು ಸಾಧ್ಯವಾಗಿರುವುದು ಮತ್ತು ಹಲವರ ಜೀವನಕ್ಕೆ ಹತ್ತಿರವಾದ ಕತೆಗಳನ್ನು ಹೇಳಲು ಸಾಧ್ಯವಾಗಿರುವುದು ನನ್ನ ಅದೃಷ್ಟ. ನಿಮ್ಮಿಂದ ನಿರಂತರವಾಗಿ ಸಿಗುತ್ತಿರುವ ಪ್ರೀತಿ ನನಗೆ ಸದಾ ಸ್ಪೂರ್ತಿ ಮತ್ತು ಅಂತಹ ನಿಜವಾದ ಅಭಿಮಾನಿಗಳನ್ನು ಹೊಂದಿರುವುದು ನಿಜಕ್ಕೂ  ನನ್ನ ಭಾಗ್ಯ. ನಿಮ್ಮ ಈ ಪ್ರೋತ್ಸಾಹ ಎಂಥದ್ದೇ ಸವಾಲು ಎದುರಿಸುವ ಧೈರ್ಯ ನನಗೆ ನೀಡಿದೆ. ಇದೆಲ್ಲದಕ್ಕೂ ನಾನು ಒಂದು ಧನ್ಯವಾದ ಎಂದು ಹೃದಯಾಂತರಾಳದಿಂದ ಹೇಳಬಲ್ಲೆ ಅಷ್ಟೆ’ ಎಂದು ಕಿಚ್ಚ ಧನ್ಯವಾದ ಸಲ್ಲಿಸಿದ್ದಾರೆ.

ಸುದೀಪ್ 1997 ರಲ್ಲಿ ತಾಯವ್ವ ಸಿನಿಮಾ ಮೂಲಕ ಪೋಷಕ ಪಾತ್ರಧಾರಿಯಾಗಿ ಎಂಟ್ರಿ ಕೊಟ್ಟಿದ್ದರು. ಆದರೆ ಅವರು ಸೋಲೋ ಹೀರೋ ಆಗಿ ಸಕ್ಸಸ್ ಕಂಡಿದ್ದು 2000 ರಲ್ಲಿ ಬಂದ ಸ್ಪರ್ಶ ಸಿನಿಮಾ ಮೂಲಕ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ