ಜ್ಯೂ ಎನ್ ಟಿಆರ್ ಭೇಟಿ ಕೊಟ್ಟ ಕೆರಾಡಿಯ ಈ ಗುಹೆಯೊಳಗಿನ ದೇವಾಲಯದ ವಿಶೇಷತೆ ತಿಳಿಯಿರಿ

Krishnaveni K

ಸೋಮವಾರ, 2 ಸೆಪ್ಟಂಬರ್ 2024 (11:00 IST)
Photo Credit: Instagram
ಉಡುಪಿ: ಜ್ಯೂ ಎನ್ ಟಿಆರ್ ಅವರನ್ನು ತಮ್ಮ ತವರಿನ ಎಲ್ಲಾ ದೇವಾಲಯಗಳಿಗೆ ನಟ ರಿಷಬ್ ಶೆಟ್ಟಿಸುತ್ತಿಸಿದ್ದಾರೆ. ಇದೀಗ ಕೆರಾಡಿಯ ಗುಹೆಯೊಳಗಿನ ದೇವಾಲಯವೊಂದಕ್ಕೆ ಭೇಟಿ ನೀಡಿರುವ ವಿಡಿಯೋವನ್ನು ರಿಷಬ್ ಹಂಚಿಕೊಂಡಿದ್ದು, ಆ ದೇವಾಲಯದ ವಿಶೇಷತೆ ಏನು ತಿಳಿದುಕೊಳ್ಳಿ.

ಜ್ಯೂ. ಎನ್ ಟಿಆರ್ ಫ್ಯಾಮಿಲಿ, ಪ್ರಶಾಂತ್ ನೀಲ್ ಫ್ಯಾಮಿಲಿಯನ್ನು ಕರೆದುಕೊಂಡು ರಿಷಬ್ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಉಡುಪಿ ಕೃಷ್ಣ ಮಠ, ಕೊಲ್ಲೂರು ಮುಕಾಂಬಿಕೆಯ ಸನ್ನಿಧಿಗೆ ಭೇಟಿ ನೀಡಿದ್ದರು. ಅದರ ಜೊತೆಗೆ ಕೆರಾಡಿಯ ಮೂಡಗಲ್ ಕೇಶವನಾಥೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಗುಹೆಯೊಳಗೆ ನೀರಿನಲ್ಲಿ ಜ್ಯೂ.ಎನ್ ಟಿಆರ್ ಮತ್ತು ಪ್ರಶಾಂತ್ ನೀಲ್ ಫ್ಯಾಮಿಲಿ ಜೊತೆಗೆ ರಿಷಬ್ ದಂಪತಿ ದೇವರ ದರ್ಶನ ಪಡೆದು ವಿಶೇಷ ಅನುಭವ ಪಡೆದಿದ್ದಾರೆ. ಅವರ ಈ ವಿಡಿಯೋ ನೋಡುತ್ತಿದ್ದರೆ ಎಷ್ಟೋ ಜನರಿಗೆ ಈ ದೇವಾಲಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಶುರುವಾಗಿದೆ.

ಈ ದೇವಾಲಯವಿರುವುದು ರಿಷಬ್ ತವರು ಕೆರಾಡಿಯಲ್ಲಿ. ಉಡುಪಿಯಿಂದ ಸುಮಾರು 75-80 ಕಿ.ಮೀ. ದೂರದಲ್ಲಿ ಈ ದೇವಾಲಯವಿದೆ. ಇದು ತೀರಾ ಹಳ್ಳಿ ಪ್ರದೇಶ. ಇಲ್ಲಿಗೆ ಸರಿಯಾದ ರಸ್ತೆ ಸಂಪರ್ಕವೂ ಇಲ್ಲ. ನಿಮ್ಮ ಸ್ವಂತ ವಾಹನದಲ್ಲಿ ಬಂದರೂ ಕೆಲವು ಹೆಜ್ಜೆ ನಡೆದುಕೊಂಡೇ ಹೋಗಬೇಕು. ಜ್ಯೂ. ಎನ್ ಟಿಆರ್ ಫ್ಯಾಮಿಲಿ ಕೂಡಾ ನಡೆದುಕೊಂಡೇ ಗುಡ್ಡಗಾಡಿನ ನಡುವೆ ಬಂದು ದೇವಾಲಯಕ್ಕೆ ತಲುಪಿದೆ.

ಗುಹೆಯೊಳಗೆ ಪುಟ್ಟ ಈಶ್ವರನ ಗುಡಿಯಿದೆ. ಈ ಗುಹೆ ಅಪಾಯಕಾರಿ ಅಲ್ಲ. ಯಾರು ಬೇಕಾದರೂ ಹೋಗಬಹುದು. ಇಲ್ಲಿ ಸದಾ ನೀರು ತುಂಬಿರುತ್ತದೆ. ಇಲ್ಲಿ ಸಾಕಷ್ಟು ಸಂಖ್ಯೆಗಳಲ್ಲಿ ಮೀನುಗಳಿರುತ್ತವೆ. ಈ ಮೀನುಗಳಿಗೆ ಅಕ್ಕಿ ಆಹಾರವಾಗಿ ಕೊಡಬಹುದು. ವರ್ಷಕ್ಕೊಮ್ಮೆ ಎಳ್ಳು ಅಮವಾಸ್ಯೆ ಇಲ್ಲಿ ವಿಶೇಷವಾಗಿ ಆಗ ಮಾತ್ರ ಇಲ್ಲಿ ಸಾಕಷ್ಟು ಜನ ಇಲ್ಲಿ ಸೇರುತ್ತಾರೆ. ಹಾಗೆಂದು ಉಳಿದ ದಿನಗಳಲ್ಲಿ ಬರಬಾರದು ಎಂದೇನಿಲ್ಲ. ಆದರೆ ಆ ದಿನ ವಿಶೇಷವಾಗಿತ್ತದೆ. ಉಳಿದ ದಿನ ಕೇವಲ ಅರ್ಚಕರು ಮಾತ್ರ ನಿತ್ಯ ಪೂಜೆ ಮಾಡಿಕೊಂಡು ಹೋಗುತ್ತಾರೆ. ಉಡುಪಿಯ ಸುತ್ತಮುತ್ತ ಪ್ರವಾಸ ಹಾಕಿಕೊಂಡಾಗ ಇಲ್ಲಿಗೂ ಭೇಟಿ ಕೊಡಬಹುದು. ಹೆಚ್ಚು ಜನವಾಸವಿಲ್ಲ, ರಸ್ತೆ ಸಂಪರ್ಕವಿಲ್ಲದೇ ಇದ್ದರೂ ಈ ಮಳೆಗಾಲದಲ್ಲಿ ಹಚ್ಚ ಹಸಿರಿನ ಸುಂದರ ಪರಿಸರದ ನಡುವೆ ಈ ದೇವಾಲಯಕ್ಕೆ ಬರುವುದೇ ವಿಶೇಷ ಅನುಭವ ಕೊಡುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ