ಕಿರುತೆರೆಯಲ್ಲಿ ಮೂಡಿಬರಲಿದೆ ಕೋಟಿಗೊಬ್ಬ 2

ಬುಧವಾರ, 11 ಜನವರಿ 2017 (09:52 IST)
ಕಳೆದ ವರ್ಷದ ಸೂಪರ್ ಹಿಟ್ ಚಿತ್ರ ಕಿಚ್ಚ ಸುದೀಪ್ ಅಭಿನಯದ ’ಕೋಟಿಗೊಬ್ಬ 2’. ಇದೇ ಶನಿವಾರ ಈ ಚಿತ್ರ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ ಈ ಚಿತ್ರವನ್ನು ಅಂದು ಸಂಜೆ 6ಗಂಟೆಗೆ ಪ್ರಸಾರ ಮಾಡುತ್ತಿದೆ ಉದಯ ವಾಹಿನಿ.
 
ಕೆ.ಎಸ್. ರವಿಕುಮಾರ್ ಆಕ್ಷನ್ ಕಟ್ ಹೇಳಿರುವ ಚಿತ್ರದ ನಾಯಕಿ ನಿತ್ಯಾ ಮೆನನ್. ಈ ಚಿತ್ರದಲ್ಲಿ ಸುದೀಪ್ ಅವರು ಶಿವ ಮತ್ತು ಸತ್ಯ ಎಂಬ ಎರಡು ಭಿನ್ನ ಶೇಡ್‍ಗಳಲ್ಲಿ ಅಭಿನಯಿಸಿದ್ದಾರೆ. ದಾಖಲೆ ಇಲ್ಲದ ಕೋಟ್ಯಾಂತರ ಹಣ ಲಪಟಾಯಿಸುವ ಮೂಲಕ ಶಿವ ತಂದೆಯ ಕನಸು ನೆರವೇರಿಸುತ್ತಾನೆ. ಆದರೆ ಪೊಲೀಸರು ಅವನನ್ನು ಹಿಡೀತಾರಾ ಎಂಬುದು ಚಿತ್ರದ ನಿರ್ಣಾಯಕ ಭಾಗ.
 
ಪೊಲೀಸ್ ಅಧಿಕಾರಿಯಾಗಿ ಖಳನಟನಾಗಿ ಮಿಂಚುತ್ತಿರುವ ಪಿ ರವಿಶಂಕರ್ ಅಭಿನಯಿಸಿದ್ದಾರೆ. ಚಿತ್ರದ ತಾರಾಗಣದಲ್ಲಿ ಸಾಧು ಕೋಕಿಲ, ಪ್ರಕಾಶ್ ರಾಜ್, ಅಚ್ಯುತ ಕುಮಾರ್, ನಾಸಿರ್ ಮುಂತಾದ ಕಲಾವಿದರಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಉದಯ ಟಿವಿಯಿಂದ ವೀಕ್ಷಕರಿಗೆ ಭರ್ಜರಿ ಕೊಡುಗೆ ಇದು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ