ರಿಲೀಸ್ ಡೇಟ್ ಅನೌನ್ಸ್ ಮಾಡಿದ ಭಜರಂಗಿ 2, ಸಲಗ, ಕೋಟಿಗೊಬ್ಬ 3

ಭಾನುವಾರ, 26 ಸೆಪ್ಟಂಬರ್ 2021 (16:45 IST)
ಬೆಂಗಳೂರು: ಥಿಯೇಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಅವಕಾಶ ನೀಡಿದ ಬೆನ್ನಲ್ಲೇ ಸ್ಟಾರ್ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ.


ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2, ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶಿಸಿ, ನಟಿಸಿರುವ ಸಲಗ ಸಿನಿಮಾ ಕೂಡಾ ಇಂದು ರಿಲೀಸ್ ಡೇಟ್ ಅನೌನ್ಸ್ ಮಾಡಿವೆ.

ನಿನ್ನೆ ಸೂರಜ್-ಧನ್ಯಾ ರಾಮ್ ಕುಮಾರ್ ಅಭಿನಯದ ನಿನ್ನ ಸನಿಹಕೆ ಸಿನಿಮಾ ಅಕ್ಟೋಬರ್ 8 ಕ್ಕೆ ರಿಲೀಸ್ ಆಗುವ ಸುದ್ದಿ ಬಂದಿತ್ತು. ಇದೀಗ ಭಜರಂಗಿ 2 ಅಕ್ಟೋಬರ್ 29 ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ. ಸಲಗ ಟೀಂ ಅಕ್ಟೋಬರ್ 14 ಕ್ಕೆ ತೆರೆ ಮೇಲೆ ಬರುವುದಾಗಿ ಘೋಷಿಸಿದೆ.  ವಿಶೇಷವೆಂದರೆ ಇದೇ ದಿನ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಕೂಡಾ ತೆರೆಗೆ ಬರುತ್ತಿದೆ. ಇನ್ನಷ್ಟು ಸಿನಿಮಾಗಳ ರಿಲೀಸ್ ಡೇಟ್ ಸದ್ಯದಲ್ಲೇ ಬಹಿರಂಗವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ