ಜೈ ಶ್ರೀರಾಮ ಎನ್ನಿ ಎಂದಿದ್ದಕ್ಕೆ ಗಾಯಕಿ ಕೆಎಸ್ ಚಿತ್ರಾಗೆ ಬಿಜೆಪಿ ಹಣೆಪಟ್ಟಿ ಕಟ್ಟಿದ ನೆಟ್ಟಿಗರು
ಕೆ.ಎಸ್. ಚಿತ್ರಾ ಕೇವಲ ಮಲಯಾಳಂ ಭಾಷೆಗೆ ಮಾತ್ರವಲ್ಲ, ಇಡೀ ರಾಷ್ಟ್ರಕ್ಕೇ ಹೆಮ್ಮೆಯ ಗಾಯಕಿ. ಅವರ ಸಾಧನೆ ಬಗ್ಗೆ ಎರಡು ಮಾತಿಲ್ಲ. ಆದರೆ ಜನವರಿ 22 ರಂದು ರಾಮಮಂದಿರ ಲೋಕಾರ್ಪಣೆ ಸಂದರ್ಭದಲ್ಲಿ ಜೈ ಶ್ರೀರಾಮ ಮಂತ್ರ ಹೇಳಿ ಅದೇ ದಿನ ಸಂಜೆ ಮನೆಯಲ್ಲಿ ದೀಪ ಹಚ್ಚಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ದರು.
ಅವರ ಈ ವಿಡಿಯೋಗೆ ಕೆಲವು ವರ್ಗದ ನೆಟ್ಟಿಗರು ತೀವ್ರ ಟ್ರೋಲ್ ಮಾಡಿದ್ದರು. ರಾಮಮಂದಿರಕ್ಕೆ ಬೆಂಬಲಿಸಿದ ಏಕೈಕ ಕಾರಣಕ್ಕೆ ಚಿತ್ರಾ ಬಿಜೆಪಿಗೆ ಬೆಂಬಲ ಕೊಡುತ್ತಿದ್ದಾರೆಂದು ಹಣೆಪಟ್ಟಿ ನೀಡಿದ್ದಾರೆ.
ವಿವಾದಗಳಿಂದ ದೂರವೇ ಇರುವ ಮೃದು ಸ್ವಭಾವದ ಗಾಯಕಿಗೆ ಇದು ಆಘಾತ ತಂದಿದೆ. ಇದೀಗ ಅವರು ಸೋಷಿಯಲ್ ಮೀಡಿಯಾ ಖಾತೆಯಿಂದ ಆ ವಿಡಿಯೋವನ್ನೇ ಡಿಲೀಟ್ ಮಾಡಿದ್ದಾರೆ.