ಲೋಕವೆಲ್ಲಾ ಹುಚ್ಚರ ಸಂತೆ ಎಂದ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ

geetha

ಮಂಗಳವಾರ, 16 ಜನವರಿ 2024 (21:00 IST)
ಶಿವಮೊಗ್ಗ :ಟೀಕೆ ಮಾಡುವಾಗ ವೈಯಕ್ತಿಯ ವಿಷಯಗಳ ಬಗ್ಗೆ ಪ್ರಸ್ತಾಪಿಸುವುದು ಸರಿಯಲ್ಲ ಎಂದು ಹೇಳಿದ ಕೆ.ಎಸ್‌. ಈಶ್ವರಪ್ಪ, ರಾಜಕಾರಣಿಗಳು ಈ ಹುಚ್ಚಾಟವನ್ನು ಬಿಡಬೇಕು ಎಂದು ಅನಂತ್‌ ಕುಮಾರ್‌ ಹೆಗಡೆ ಅವರ ಕಿವಿ ಹಿಂಡಿದ್ದಾರೆ. 
 
ಜೊತೆಗೆ , ಸಿಎಂ ಸಿದ್ದರಾಮಯ್ಯ ನಿಜಕ್ಕೂ ದೈವಭಕ್ತರು . ಅವರು ಒಮ್ಮೆ ಅಯೋಧ್ಯೆಗೆ ಹೋಗುತ್ತೇನೆ ಎಂದು ಹೇಳಿಕೆ ನೀಡಿದರೆ ಆಗ ಎಲ್ಲವೂ ಸರಿಹೋಗುತ್ತದೆ ಎಂದು ಈಶ್ವರಪ್ಪ ಹೇಳಿದ್ದು, ಪ್ರತಿಬಾರಿಯೂ ಸಿದ್ದರಾಮಯ್ಯ ಮಾತು ಬದಲಿಸುವುದು ಸರಿಯಲ್ಲ ಎಂದರು.

ಸಂಸದ ಅನಂತ್‌ ಕುಮಾರ್‌ ಹೆಗಡೆ ಅವರು ಸಿಎಂ ಸಿದ್ದರಾಮಯ್ಯ ವಿರುದ್ದ ನೀಡಿರುವ ಹೇಳಿಕೆಯನ್ನು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಖಂಡಿಸಿದ್ದಾರೆ. ಈ ರೀತಿ ಪ್ರತಿಯೊಬ್ಬರೂ ಮಾತನಾಡುತ್ತಾ ಹೋದರೇ ಜಗತ್ತೇ ಹುಚ್ಚರ ಸಂತೆಯಾಗುತ್ತದೆ. ಹುಚ್ಚಾಸ್ಪತ್ರೆಗಳಲ್ಲಿ ಸ್ಥಳ ಸಾಕಾಗುವುದಿಲ್ಲ ಎಂದು ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ